ದಾವಣಗೆರೆ:ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಸೋಂಕಿತರಿಗೆ ರಸಮಂಜರಿ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಸ್ವತಃ ಹೆಜ್ಜೆ ಹಾಕುವ ಮೂಲಕ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸೋಂಕಿತರಿಗೆ ಹುರಿದುಂಬಿಸಿದರು.
ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಹೆಜ್ಜೆ ಹಾಕಿದ ಶಾಸಕ ರೇಣುಕಾಚಾರ್ಯ ವರನಟ ಡಾ.ರಾಜ್ ಕುಮಾರ್ ಅವರ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ರೇಣುಕಾಚಾರ್ಯ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ಈ ಕೋವಿಡ್ ಕೇರ್ ಸೆಂಟರ್‌ನಲ್ಲಿ 102 ಸೋಂಕಿತರಿದ್ದು, ಇವರಿಗಾಗಿ ಸೋಮವಾರ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಿವಮೊಗ್ಗದ ಗಾಯಕರು ಹಾಡಿದ ಹಾಡಿಗೆ ನೃತ್ಯ ಮಾಡುವ ಮೂಲಕ ರೇಣುಕಾಚಾರ್ಯ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದರು.
ಇದನ್ನೂ ಓದಿ:'ಗುಂಡು' ಮಕ್ಕಳಿಗೆ ಬೇಸರದ ಸುದ್ದಿ: ಮದ್ಯ ಬಾಟಲಿಗಳ ಸಾಲಾಗಿ ನಿಲ್ಲಿಸಿ ನಾಶಗೈದ ಪೊಲೀಸರು