ಕರ್ನಾಟಕ

karnataka

ETV Bharat / city

ಹಿಜಾಬ್-ಕೇಸರಿ ಶಾಲು ಧರಿಸುವುದು ಎರಡೂ ಸದ್ಯ ಕಾನೂನುಬಾಹಿರ : ಸಂಸದ ಜಿಎಂ‌‌ ಸಿದ್ದೇಶ್ವರ್ - mp gm siddheshwar on hijab

ಶಾಲಾ-ಕಾಲೇಜುಗಳಲ್ಲಿ ಹಿಜಾಬ್-ಕೇಸರಿ ಶಾಲು ಧರಿಸುವುದು ಎರಡೂ ಸದ್ಯ ಕಾನೂನು ಬಾಹಿರ. ಎಲ್ಲರೂ ಸಮವಸ್ತ್ರದಲ್ಲಿ ಶಾಲಾ-ಕಾಲೇಜುಗಳಿಗೆ ಬರಬೇಕು..

MP GM Siddheshwar
ಸಂಸದ ಜಿಎಂ‌‌ ಸಿದ್ದೇಶ್ವರ್

By

Published : Feb 12, 2022, 5:16 PM IST

ದಾವಣಗೆರೆ: ಅಲ್ಲಾ ಹು ಅಕ್ಬರ್​ ಎಂದು ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಉಡುಗೊರೆ ಕೊಟ್ಟಿದ್ದಾರೆ. ಸಿ ಎಂ ಇಬ್ರಾಹಿಂ ನಮ್ಮ ಸ್ನೇಹಿತ, ಜೈ ಶ್ರೀರಾಮ್​ ಎಂದವರಿಗೂ ಏನಾದ್ರು ಕೊಡಿ ಎಂದು ಕೇಳುವೆ ಎಂದು ಸಂಸದ ಜಿಎಂ‌‌ ಸಿದ್ದೇಶ್ವರ್ ವ್ಯಂಗ್ಯವಾಡಿದರು.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್-ಕೇಸರಿ ವಿವಾದದ ಪ್ರತಿಭಟನೆ ವೇಳೆ ಅಲ್ಲಾ ಹು ಅಕ್ಬರ್ ಎಂದು ಕೂಗಿದ ಮಂಡ್ಯದ ಯುವತಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ‌.

ಜೊತೆಗೆ ಕೆಲ ಉಡುಗೊರೆ ನೀಡಿದ್ದಾರೆ. ಈ ಬಗ್ಗೆ ಸಿ ಎಂ ಇಬ್ರಾಹಿಂಗೆ ಕೇಳುವೆ, ಜೈಶ್ರೀರಾಮ್​ ಎಂದವರಿಗೂ ಏನಾದ್ರು ಕೊಡಿ ಎಂದು ಹೇಳುವೆ. ಅವ್ರು ಕೂಡ ಹರಹರ ಮಹಾದೇವ ಎನ್ನುವವರು ಅಲ್ವೇ? ಎಂದರು.

ಹಿಜಾಬ್-ಕೇಸರಿ ಶಾಲು ವಿವಾದದ ಸಂಬಂಧ ಸಂಸದ ಜಿಎಂ‌‌ ಸಿದ್ದೇಶ್ವರ್ ಮಾತನಾಡಿರುವುದು..

ಶಾಲಾ-ಕಾಲೇಜುಗಳಲ್ಲಿ ಹಿಜಾಬ್-ಕೇಸರಿ ಶಾಲು ಧರಿಸುವುದು ಎರಡೂ ಸದ್ಯ ಕಾನೂನು ಬಾಹಿರವಾಗಿದೆ. ಎಲ್ಲರೂ ಸಮವಸ್ತ್ರದಲ್ಲಿ ಶಾಲಾ -ಕಾಲೇಜುಗಳಿಗೆ ಬರಬೇಕು. ಈ ಸಂಬಂಧ ಈಗಾಗಲೇ ಕೋರ್ಟ್ ಮಧ್ಯಂತರ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ.

ಆ ಪ್ರಕಾರ ಎಲ್ರೂ ನಡೆದುಕೊಳ್ಳಲಿ. ಈ ವಿಚಾರದಲ್ಲಿ ಗೊಂದಲ ಬೇಡ. ಮೇಲಾಗಿ ಸಿಎಂ ಅವರು ಈ ವಿಚಾರವಾಗಿ ಯಾವುದೇ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ ಎಂದರು.

ಇದನ್ನೂ ಓದಿ:ಹಿಜಾಬ್-ಕೇಸರಿ ಶಾಲು ವಿವಾದ.. ಬೆಳಗಾವಿಯಲ್ಲಿ ಸಿಎಂ ಹೀಗಂದರು..

ಕೋರ್ಟ್ ಆದೇಶ ಏನು ಬರುತ್ತೆ ಅದಕ್ಕೆ ಜನ ಹೊಂದಿಕೊಳ್ಳಬೇಕು. ಈಗಾಗಲೇ ಮಲೇಬೆನ್ನೂರು ಹಾಗೂ ಹರಿಹರದಲ್ಲಿ ಈ ಸಂಬಂಧ ಗಲಾಟೆ ಆಗಿದೆ. ಇದೀಗ ಶಾಂತಿ ನೆಲೆಸಿದೆ. ಈ ರೀತಿಯ ಘಟನೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದರು.

ABOUT THE AUTHOR

...view details