ಕರ್ನಾಟಕ

karnataka

ETV Bharat / city

ವಿದ್ಯುತ್​​​​​ಲೈನ್ ಕಾಮಗಾರಿಗೆ ವಿರೋಧ: ದಾವಣಗೆರೆಯಲ್ಲಿ ವಿಷ ಸೇವಿಸಿ ತಾಯಿ ಮಗ ಆತ್ಮಹತ್ಯೆಗೆ ಯತ್ನ - Mother and son attempts suicide in Davanagere

ವಿದ್ಯುತ್ ಲೈನ್ ಕಾಮಗಾರಿ ವಿರೋಧಿಸಿ ತಾಯಿ ಮಗ ಜಮೀನಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿದರೆಕೆರೆ ಗ್ರಾಮದಲ್ಲಿ ನಡೆದಿದೆ.

Davanagere
ದಾವಣಗೆರೆ

By

Published : Dec 22, 2021, 3:42 PM IST

ದಾವಣಗೆರೆ: ತಮ್ಮ ಜಮೀನಿನಲ್ಲಿ ಹಾದು ಹೋಗುವ ವಿದ್ಯುತ್ ಲೈನ್ ಕಾಮಗಾರಿ ವಿರೋಧಿಸಿ ತಾಯಿ ಮಗ ಜಮೀನಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿದರೆಕೆರೆ ಗ್ರಾಮದಲ್ಲಿ ನಡೆದಿದೆ.

ದಾವಣಗೆರೆಯಲ್ಲಿ ವಿಷ ಸೇವಿಸಿ ತಾಯಿ ಮಗ ಆತ್ಮಹತ್ಯೆಗೆ ಯತ್ನ..

ಉಜ್ಜನಗೌಡ ಶಾಂತವೀರಯ್ಯ ಮತ್ತು ಸಿದ್ದಮ್ಮ ಶಾಂತವಿರಯ್ಯ ಆತ್ಮಹತ್ಯೆಗೆ ಯತ್ನಿಸಿದವರು.‌ ಬಿದರೆಕೆರೆ ಗ್ರಾಮದ ಚಿಕ್ಕ, ಅತೀ ಚಿಕ್ಕ ರೈತರ ಜಮೀನಿನಲ್ಲಿ ರಿನ್ಯೂವ್ ಪವರ್ ಪ್ಲಾಂಟ್ ಖಾಸಗಿ ಕಂಪನಿಯವರು 220 ವೋಲ್ಟೇಜ್ ವಿದ್ಯುತ್​​ ಲೈನ್ ಕಾಮಗಾರಿ ನಡೆಸುತ್ತಿದ್ದಾರೆ.

ವಿದ್ಯುತ್ ಲೈನ್ ತಂತಿ ‌ಹಾದು ಹೋದರೆ ಜಮೀನಿನಲ್ಲಿ‌ ಏನೂ ಬೆಳೆಯಲು‌ ಆಗುವುದಿಲ್ಲ‌ ಎಂದು ಚಿಂತೆಗೀಡಾದ ಉಜ್ಜನಗೌಡ ತಮ್ಮ ಜಮೀನಿನಲ್ಲಿ ವಿದ್ಯುತ್ ಮಾರ್ಗ ಬದಲಾವಣೆ ಮಾಡಿ ಎಂದು ಆಗ್ರಹಿಸಿ ವಿಷ ಸೇವಿಸಿದ್ದಾರೆ.‌

ಈ ಸಂಬಂಧ ಜಿಲ್ಲಾಧಿಕಾರಿ‌ ಮಹಾಂತೇಶ್ ಬೀಳಗಿಯವರಿಗೆ ಮಾಹಿತಿ ನೀಡಿದರು, ಯಾವುದೇ ಪ್ರಯೋಜನವಾಗಿಲ್ಲ‌. ಖಾಸಗಿ ಕಂಪನಿಯವರು ವಿದ್ಯುತ್ ಕಾಮಗಾರಿ ಮುಂದುವರಿಸಿದ ಕಾರಣ ರೈತ ಉಜ್ಜನಗೌಡ ಶಾಂತವೀರಯ್ಯ ಮತ್ತು ಸಿದ್ದಮ್ಮ ಶಾಂತವೀರಯ್ಯ ಅವರು ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲೇ ವಿಷ ಸೇವಿಸಿದ್ದಾರೆ ಎನ್ನಲಾಗ್ತಿದೆ.

ಅಸ್ವಸ್ಥರಾದ ತಾಯಿ ಮಗನನ್ನು ಚಿಕಿತ್ಸೆಗಾಗಿ ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ:ಯೂಟ್ಯೂಬ್ ವಿಡಿಯೋ ನೋಡಿ ಪತ್ನಿಗೆ ಹೆರಿಗೆ ಯತ್ನ : ಮಗು ಸಾವು, ವ್ಯಾಪಾರಿಯ ಬಂಧನ

ABOUT THE AUTHOR

...view details