ದಾವಣಗೆರೆ:ಬಲವಂತದ ಹೆರಿಗೆಯಿಂದಾಗಿ ಗರ್ಭಿಣಿ ಹಾಗೂ ಆಕೆಯ ಹೊಟ್ಟೆಯಲ್ಲಿದ್ದ ಮಗು ಕಣ್ಬಿಡುವುದಕ್ಕೂ ಮುನ್ನವೇ ಕಣ್ಮುಚ್ಚಿರುವ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಕಾವ್ಯ (21) ಸಾವನ್ನಪ್ಪಿದ ಗರ್ಭಿಣಿ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನಿಲವಂಜಿ ಗ್ರಾಮದ ನಿವಾಸಿ ಕಾವ್ಯ ತಡರಾತ್ರಿ ಹೆರಿಗೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಈ ವೇಳೆ, ವೈದ್ಯರು ಹಾಗೂ ನರ್ಸ್ಗಳು ಬಲವಂತವಾಗಿ ನಾರ್ಮಲ್ ಡೆಲಿವರಿ ಮಾಡಿಸಲು ಪ್ರಯತ್ನಿಸಿದ್ದು, ಗರ್ಭಿಣಿ ಕಾವ್ಯ ಹೊಟ್ಟೆಯನ್ನು ಜೋರಾಗಿ ಒತ್ತಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಗರ್ಭದಲ್ಲಿಯೇ ಮಗು ಕಣ್ಮುಚ್ಚಿದ್ದು, ಮಹಿಳೆಯೂ ಕೂಡ ಸಾವನ್ನಪ್ಪಿದ್ದಾಳೆ ಎಂದು ಆಕೆ ಪೋಷಕರು ಆರೋಪಿಸಿದ್ದಾರೆ.