ಕರ್ನಾಟಕ

karnataka

ETV Bharat / city

ನನ್ನಿಂದ ರವೀಂದ್ರನಾಥ್​ ರಾಜೀನಾಮೆ ನೀಡಿಲ್ಲ, ಡಿಕೆಶಿ ಆರೋಪ ಸುಳ್ಳು: ರೇಣುಕಾಚಾರ್ಯ - ದಾವಣಗೆರೆಯಲ್ಲಿ ರೇಣುಕಾಚಾರ್ಯ ಪ್ರತಿಕ್ರಿಯೆ

ನಾನು ಯಾವುದೇ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿಲ್ಲ. ರವೀಂದ್ರನಾಥ್ ಅವರ ರಾಜೀನಾಮೆಗೆ ನಾನು ಕಾರಣ ಅಲ್ಲ ಎಂದು ಡಿ.ಕೆ. ಶಿವಕುಮಾರ್​ ಆರೋಪಕ್ಕೆ ಶಾಸಕ ಎಂ.ಪಿ. ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

mla-renukacharya
ರೇಣುಕಾಚಾರ್ಯ

By

Published : May 12, 2022, 10:57 PM IST

ದಾವಣಗೆರೆ:ಹಿರಿಯ ಐಪಿಎಸ್ ಅಧಿಕಾರಿ, ಡಿಜಿಪಿ ರವೀಂದ್ರನಾಥ್ ಅವರ ರಾಜೀನಾಮೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಡಿ.ಕೆ. ಶಿವಕುಮಾರ್​ ಅವರು ಗಾಳಿಯಲ್ಲಿ ಗುಂಡು ಹೊಡೀತಾರೆ ಎಂದು ತಮ್ಮ ವಿರುದ್ಧ ಆರೋಪ ಮಾಡಿದ್ದ ಕೆಪಿಸಿಸಿ ಅಧ್ಯಕ್ಷರಿಗೆ ಶಾಸಕ ಎಂಪಿ ರೇಣುಕಾಚಾರ್ಯ ತಿರುಗೇಟು ನೀಡಿದರು.

ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಗಾಳಿಯಲ್ಲಿ ಗುಂಡು ಹೊಡೆಯುತ್ತಾರೆ. ಅಧಿಕಾರಿ ರವೀಂದ್ರನಾಥ್ ಅವರ ರಾಜೀನಾಮೆಗೆ ನಾನು ಕಾರಣ ಅಲ್ಲ. ನಾನು ಯಾವುದೇ ನಕಲಿ ಜಾತಿ ಪ್ರಮಾಣಪತ್ರ ಪಡೆದಿಲ್ಲ. ಶಿವಕುಮಾರ್ ಅವರು ವಿನಾಕಾರಣ ನನ್ನ ಮೇಲೆ ಆರೋಪ ಮಾಡುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.

ನನ್ನಿಂದ ಡಿಜಿಪಿ ರವೀಂದ್ರನಾಥ್​ ರಾಜೀನಾಮೆ ನೀಡಿಲ್ಲ: ರೇಣುಕಾಚಾರ್ಯ

ಸಿದ್ದರಾಮಯ್ಯ -ಡಿ.ಕೆ.ಶಿವಕುಮಾರ್​ ನಡುವೆ ಸಿಎಂ ಆಗಬೇಕೆಂಬ ಶೀತಲ ಸಮರ ನಡೆಯುತ್ತಿದೆ. ಮುಖ್ಯಮಂತ್ರಿ ಆಗುತ್ತೇನೆಂದು ಡಿಕೆ ಶಿವಕುಮಾರ್ ಅವರು ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್​​​ನಲ್ಲಿ ಎ,ಬಿ,ಸಿ,ಡಿ ಎಂಬ ಗುಂಪುಗಳಿವೆ. ಆದರೆ, ಬಿಜೆಪಿಯಲ್ಲಿ ಯಾವುದೇ ಗುಂಪುಗಳಿಲ್ಲ. 2023ರ ಚುನಾವಣೆಯಲ್ಲಿ ನಾವೆಲ್ಲ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಮುಳುಗುತ್ತಿರುವ ಕಾಂಗ್ರೆಸ್ ಹಡಗಿಗೆ ಡಿ.ಕೆ. ಶಿವಕುಮಾರ್ ಕ್ಯಾಪ್ಟನ್ ಎಂದು ಲೇವಡಿ ಮಾಡಿದರು.

ಓದಿ:'ಮುಂದಿನ ಸಿಎಂ ವಿಜಯೇಂದ್ರ'..ಬಿಎಸ್​ವೈ ಪುತ್ರನ ಪರ ಅಭಿಮಾನಿಗಳ ಘೋಷಣೆ

For All Latest Updates

TAGGED:

ABOUT THE AUTHOR

...view details