ಕರ್ನಾಟಕ

karnataka

ETV Bharat / city

ಜನಸೇವಕ ಈ ಶಾಸಕ.. ಕೊರೊನಾ‌ ಸೋಂಕಿತರಿಗೆ ಪೊಂಗಲ್ ತಯಾರಿಸಿದ ರೇಣುಕಾಚಾರ್ಯ - mla renukacharaya cooking food

ಕೋವಿಡ್​ನ ಸಂದಿಗ್ಧ ಪರಿಸ್ಥಿತಿಯಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಕ್ಷೇತ್ರದ ಸೋಂಕಿತರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಹೊನ್ನಾಳಿ ಪಟ್ಟಣದಲ್ಲಿರುವ ಅವರ ಮನೆಯ ಆವರಣದಲ್ಲಿ ಅಡುಗೆ ತಯಾರಿಸಿ ಸೋಂಕಿತರಿಗೆ ಹಂಚುತ್ತಿದ್ದಾರೆ. ಅವರು ಇತ್ತೀಚೆಗೆ ರಾತ್ರೋರಾತ್ರಿ ಆಕ್ಸಿಜನ್​ ಪೂರೈಸಿ 20 ರೋಗಿಗಳ ಪ್ರಾಣ ಉಳಿಸಿದ್ದರು.

mla renukacharaya distributed pongal to covid patient in davanagere
ಶಾಸಕ ರೇಣುಕಾಚಾರ್ಯ

By

Published : May 17, 2021, 3:56 PM IST

ದಾವಣಗೆರೆ: ಕೊರೊನಾ ರೋಗಿಗಳಿಗೆ ಪೌಷ್ಟಿಕ ಆಹಾರವನ್ನು ಸರಬರಾಜು ಮಾಡುವ ದೃಷ್ಟಿಯಿಂದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ದಿನನಿತ್ಯ ಆಹಾರ ವಿತರಿಸುತ್ತಿದ್ದಾರೆ.

ಕೊರೊನಾ‌ ಸೋಂಕಿತರಿಗಾಗಿ ಪೊಂಗಲ್ ತಯಾರಿಸಿದ ಶಾಸಕ ರೇಣುಕಾಚಾರ್ಯ

ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿರುವ ತಮ್ಮ ಮನೆಯ ಆವರಣದಲ್ಲಿ ಅಡುಗೆ ತಯಾರಿಸಿ ಸೋಂಕಿತರಿಗೆ ಹಂಚುತ್ತಿದ್ದಾರೆ. ಇಂದು ಸಹ ಪೊಂಗಲ್​​ ಸಿದ್ಧಪಡಿಸಿ ಪ್ಯಾಕ್​​ ಮಾಡಿ ಲಸಿಕೆ ಪಡೆಯಲು ಬಂದವರಿಗೆ ಮತ್ತು ಕೋವಿಡ್​​ ಸೋಂಕಿತರಿಗೆ ಆಹಾರ ವಿತರಿಸಿದರು.

ತಮ್ಮ ಕ್ಷೇತ್ರದಲ್ಲಿ ಕೊರೊನಾ ಹಾವಳಿ ಹೆಚ್ಚಿದಾಗಿನಿಂದ ಸೋಂಕಿತರ ಕಷ್ಟ-ನಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಅಲ್ಲದೆ, ಸದಾ ಜಾಗೃತಿ ಮೂಡಿಸುತ್ತಿರುವ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಸೋಂಕಿತರಿಗೆ ಇಮ್ಯೂನಿಟಿ ಹೆಚ್ಚಾಗಲು ಗುಣಮಟ್ಟದ ಆಹಾರ ಸರಬರಾಜು ಮಾಡುತ್ತಿರುವ ಇವರ ಕ್ಷೇತ್ರದಾದ್ಯಂತ ಪ್ರಶಂಸೆ ವ್ಯಕ್ತವಾಗ್ತಿದೆ.

ಇತ್ತೀಚೆಗೆ ರಾತ್ರೋರಾತ್ರಿ ಕೋವಿಡ್​ ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆ ಇರುವುದನ್ನು ಗಮನಿಸಿ ತಕ್ಷಣವೇ ಕಾರ್ಯೋನ್ಮುಖರಾಗಿದ್ದ ರೇಣುಕಾಚಾರ್ಯ ಹರಿಹರಕ್ಕೆ ತೆರಳಿ ಆಮ್ಲಜನಕದ ಸಿಲಿಂಡರ್​ಗಳನ್ನು ತಂದಿದ್ದರು. ಅಂದು 20 ಮಂದಿ ಕೊರೊನಾ ರೋಗಿಗಳ ಪ್ರಾಣ ಉಳಿಸಿದ್ದರು.

ABOUT THE AUTHOR

...view details