ದಾವಣಗೆರೆ: ಸ್ವಕ್ಷೇತ್ರದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಟೆಂಪಲ್ ರನ್ ಆರಂಭಿಸಿದ್ದಾರೆ. ಹೊನ್ನಾಳಿ ಪಟ್ಟಣದಲ್ಲಿರುವ ಹಿರೇಕಲ್ಮಠಕ್ಕೆ ಭೇಟಿ ನೀಡಿದ ಅವರು, ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದರು.
ನಾನು ಸಚಿವನಾಗಬೇಕೆಂದು ಲಾಭಿ ಮಾಡಿಲ್ಲ, ದೆಹಲಿಗೂ ಹೋಗಿಲ್ಲ: ರೇಣುಕಾಚಾರ್ಯ ಬಳಿಕ ಮಾತನಾಡಿದ ರೇಣುಕಾಚಾರ್ಯ, ಇವತ್ತು ಸಂಜೆಯೊಳಗಾಗಿ ಸಚಿವ ಸಂಪುಟದ ಪಟ್ಟಿ ಘೋಷಣೆಯಾಗುವ ನಿರೀಕ್ಷೆ ಇದೆ. ನಾನು ಸಚಿವನಾಗಬೇಕೆಂದು ದಿಲ್ಲಿಗೂ ಹೋಗಿಲ್ಲ, ಬೆಂಗಳೂರಿಗೂ ಹೋಗಿ ಲಾಬಿ ಮಾಡಿಲ್ಲ. ಮಧ್ಯಕರ್ನಾಟಕದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಐವರು ಶಾಸಕರು ಮನವಿ ಮಾಡಿದ್ದೇವೆ. ಯಾರಿಗೆ ಅದೃಷ್ಟ ಒಲಿಯುತ್ತೋ ಗೊತ್ತಿಲ್ಲ. ನನಗೆ ಒಂದು ಬಾರಿ ಸಚಿವ ಹಾಗೂ ಎರಡು ನಿಗಮಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಸಚಿವ ಸ್ಥಾನ ಕೊಟ್ಟರೆ ಯಶಸ್ವಿಯಾಗಿ ನಿಭಾಯಿಸುತ್ತೇನೆ. ಅದಕ್ಕೆ ನಾನು ಸಮರ್ಥಿನಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಬಿಜೆಪಿಯಲ್ಲಿ ಹಿರಿಯ-ಕಿರಿಯರೆಂಬ ಬೇಧವಿಲ್ಲ'
ಯಾರು ಜನರ ಜೊತೆಗಿರುತ್ತಾರೋ ಅವರಿಗೆ ಬಿಜೆಪಿ ಅವಕಾಶ ನೀಡುತ್ತೆ.ಮೊನ್ನೆ ದೆಹಲಿಗೆ ಹೋದಾಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ನನ್ನ ಕೆಲಸದ ಮೂಲಕವೇ ನನ್ನನ್ನು ಕೇಂದ್ರ ಸಚಿವರಿಗೆ ಪರಿಚಯಿಸಿದ್ದಾರೆ. ಅರುಣ್ ಸಿಂಗ್ ನಾನು ಕೋವಿಡ್ ಸಂದರ್ಭದಲ್ಲಿ ಮಾಡಿರುವ ಕೆಲಸವನ್ನು ಪರಿಗಣಿಸುತ್ತಾರೆಂಬ ವಿಶ್ವಾಸವಿದೆ. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾವು ಬದ್ದ ಎಂದರು.
'ಇಂದು ಸಂಜೆ ಪಟ್ಟಿ ಬಿಡುಗಡೆ ಸಾಧ್ಯತೆ'
ಸಿಎಂ ಬೊಮ್ಮಯಿಯವರು ದೆಹಲಿಗೆ ಹೋಗಿದ್ದಾರೆ. ಸಂಜೆ ವಾಪಸ್ಸಾಗ್ತಾರೆ. ವರಿಷ್ಠರ ಜೊತೆ ಚರ್ಚಿಸಿ ಇಂದು ಸಂಜೆ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಯಡಿಯೂರಪ್ಪನವರ ಲಿಸ್ಟ್ನಲ್ಲಿ ನನ್ನ ಹೆಸರು ಹೋಗಿರುವುದು ಗೊತ್ತಿಲ್ಲ. ಬಿಎಸ್ವೈ ಅರ್ಹತೆ ಇದ್ದವರಿಗೆ ಸಚಿವ ಸ್ಥಾನ ಕೊಡಿ ಎನ್ನುತ್ತಾರೆ ಹೊರತು, ಇವರಿಗೆ ಕೊಡಬೇಡಿ ಅನ್ನಲ್ಲ. ಅವರನ್ನು ಬಿಡಿ, ಇವರನ್ನು ಸಚಿವರನ್ನಾಗಿ ಮಾಡಿ ಎಂಬ ಕೀಳುಮಟ್ಟದ ರಾಜಕಾರಣವನ್ನು ಯಡಿಯೂರಪ್ಪ ಮಾಡಲ್ಲ ಎಂದರು.
ಇದನ್ನೂ ಓದಿ:ಬೊಮ್ಮಾಯಿ ಸಂಪುಟ ಸೇರಲು ಲಾಬಿ : ಬಿಎಸ್ವೈ ನಿವಾಸಕ್ಕೆ ಶಾಸಕರು, ಸ್ವಾಮೀಜಿಗಳ ದಂಡು