ಕರ್ನಾಟಕ

karnataka

ETV Bharat / city

ಮತ್ತೆ ಮುಷ್ಕರ ಮಾಡಿದರೆ ಕೆಲಸ ಕಳೆದುಕೊಳ್ಳಬೇಕಾದೀತು; ಸಾರಿಗೆ ನೌಕರರಿಗೆ ಶಾಸಕ ಚಂದ್ರಪ್ಪ ಎಚ್ಚರಿಕೆ - ಕೆಎಸ್ಆರ್​ಟಿಸಿ ನಿಗಮದ ಅಧ್ಯಕ್ಷ ಚಂದ್ರಪ್ಪ

ಸಾರಿಗೆ ನೌಕರರು ಮುಂದಿನ ದಿನಗಳಲ್ಲಿ ಮತ್ತೆ ಬಂದ್​ ಮಾಡಲು ಮುಂದಾದ್ರೆ ನಿಗಮದಿಂದ ನಿಮ್ಮನ್ನು ಕೈ ಬಿಡಲಾಗುತ್ತದೆ ಎಂದು ಹೊಳಲ್ಕೆರೆ ಶಾಸಕ, ಕೆಎಸ್ಆರ್​ಟಿಸಿ ನಿಗಮದ ಅಧ್ಯಕ್ಷ ಚಂದ್ರಪ್ಪನವರು ಸಾರಿಗೆ ನೌಕರರಿಗೆ ಎಚ್ಚರಿಕೆ ನೀಡಿದರು.

ಶಾಸಕ ಚಂದ್ರಪ್ಪ
ಶಾಸಕ ಚಂದ್ರಪ್ಪ

By

Published : Jan 18, 2021, 4:45 PM IST

ದಾವಣಗೆರೆ: ಕೊರೊನಾ ವೇಳೆ ನಿಮಗೆ ಯಾವುದೇ ತೊಂದರೆ ಮಾಡಿಲ್ಲ, ಆದರೂ ಕೂಡ ನೀವು ಬಂದ್​ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದಿರಿ. ಮತ್ತೆ ಹೀಗೆ ಮಾಡಿದ್ರೆ ನಿಮ್ಮನ್ನು ನಿಗಮ ಕೈ ಬಿಡುತ್ತದೆ ಎಂದು ಹೊಳಲ್ಕೆರೆ ಶಾಸಕ, ಕೆಎಸ್ಆರ್​ಟಿಸಿ ನಿಗಮದ ಅಧ್ಯಕ್ಷ ಚಂದ್ರಪ್ಪನವರು ಸಾರಿಗೆ ನೌಕರರಿಗೆ ಎಚ್ಚರಿಕೆ ನೀಡಿದರು.

ನೂತನ ಬಸ್ ನಿಲ್ದಾಣದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಚಂದ್ರಪ್ಪ

ದಾವಣಗೆರೆಯಲ್ಲಿ ನಡೆದ ನೂತನ ಬಸ್ ನಿಲ್ದಾಣದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಕೋಟ್ಯಾಂತರ ರೂ. ಸಂಬಳವನ್ನು ಸರ್ಕಾರ ನಿಮಗೆ ನೀಡಿದ್ದು, ಕೆಎಸ್ಆರ್​ಟಿಸಿ ನೌಕರರಿಗೆ ತೊಂದರೆಯಾಗದಂತೆ ನೋಡಿಕೊಂಡಿದೆ. ಆದರೆ ಯಾರದ್ದೋ ಮಾತು ಕೇಳಿ ನೀವು ಬಂದ್ ನಡೆಸಿದ್ರಿ, ಮತ್ತೆ ಆ ರೀತಿ ಕೆಲಸ ಮಾಡಲು ಹೋಗಬೇಡಿ. ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ, ಹಾಗೇನಾದರೂ ಮಾಡಿದ್ರೆ ಮುಂದಿನ ದಿನಗಳಲ್ಲಿ ನಿಗಮ ನಿಮ್ಮನ್ನು ಕೈ ಬಿಡುತ್ತದೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

For All Latest Updates

ABOUT THE AUTHOR

...view details