ಕರ್ನಾಟಕ

karnataka

ETV Bharat / city

ನಾನು ಸಚಿವ ಸ್ಥಾನ ಕೇಳುವುದಿಲ್ಲ.. ಅದು ನನ್ನ ರಕ್ತಗತವಾಗಿ ಬಂದಿದೆ.. ಶಾಸಕ ಯತ್ನಾಳ್ - ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ

ಕಾಂಗ್ರೆಸ್ ನವರು ಬಿಜೆಜೆಪಿಯವರನ್ನು ಸೆಳೆಯುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಬೇರೆ ಪಕ್ಷದವರ ನಮ್ಮ ಪಕ್ಷದ ನಾಯಕರನ್ನ ಸೆಳೆಯುವುದು, ನಮ್ಮ ಪಕ್ಷದವರು ಬೇರೆ ಪಕ್ಷಕ್ಕೆ ಹೋಗುವುದು ಸಾಮಾನ್ಯ. ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ ರೀತಿ ಆಗುತ್ತದೆ..‌

MLA basanagouda patil yatnal
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

By

Published : Sep 19, 2021, 5:34 PM IST

ದಾವಣಗೆರೆ :ನಾನು ಸಚಿವ ಸ್ಥಾನ ಕೇಳುವುದಿಲ್ಲ, ಅದು ನನ್ನ ರಕ್ತಗತವಾಗಿ ಬಂದಿದೆ. ಮಂತ್ರಿ ಸ್ಥಾನಕ್ಕಾಗಿ ನಾನು ಯಾರ ಕಾಲಿಗೂ ಬೀಳಲ್ಲ. ಮಠಾಧೀಶರ ಕಾಲಿಗೆ ಬಿದ್ದು ಸಚಿವ ಸ್ಥಾನ ತೆಗೆದುಕೊಳ್ಳುವುದು ನನ್ನ ರಕ್ತದಲ್ಲಿ ಬಂದಿಲ್ಲ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ

ದಾವಣಗೆರೆಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಬಿಎಸ್​​ವೈ ಅವರು ಪಕ್ಷಕ್ಕಾಗಿ ದುಡಿದ್ದಾರೆ. ಅವರಿಗೆ ಪಕ್ಷ ಕೂಡ ಸ್ಥಾನಮಾನ ನೀಡಿದೆ. ಅವರು ಹಿರಿಯರು. ಪಕ್ಷಕ್ಕೆ ಅವರು ನಿರಂತರವಾಗಿ ಮಾರ್ಗದರ್ಶಕರಾಗಲಿ. ಪಕ್ಷಕ್ಕೆ ಸಲಹೆ, ಸೂಚನೆ ನೀಡಲು ಬಿಜೆಪಿ‌ ವ್ಯಕ್ತಿ ಆಧಾರಿತ ಪಕ್ಷವಲ್ಲ. ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಕಟ್ಟಬೇಕೆಂದು ಬಿಎಸ್​​ವೈ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನವರು ಬಿಜೆಜೆಪಿಯವರನ್ನು ಸೆಳೆಯುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಬೇರೆ ಪಕ್ಷದವರ ನಮ್ಮ ಪಕ್ಷದ ನಾಯಕರನ್ನ ಸೆಳೆಯುವುದು, ನಮ್ಮ ಪಕ್ಷದವರು ಬೇರೆ ಪಕ್ಷಕ್ಕೆ ಹೋಗುವುದು ಸಾಮಾನ್ಯ. ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ ರೀತಿ ಆಗುತ್ತದೆ ಎಂದರು.‌

ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಆತಂರಿಕ ಗುದ್ದಾಟ ನಡೆಯುತ್ತಿದೆ. 17 ಜನರು ಬಿಜೆಪಿಗೆ ಹೋಗಿರುವವರನ್ನು ಸಿದ್ದರಾಮಯ್ಯ ವಾಪಸ್ ಪಕ್ಷಕ್ಕೆ ಕರೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಪಂಚಮಸಾಲಿ ಮೀಸಲಾತಿ ವಿಚಾರ ಚರ್ಚೆ :ರಾಜ್ಯದಲ್ಲಿ ಕುರುಬ, ವಾಲ್ಮೀಕಿ ಹಾಗೂ ಪಂಚಮಸಾಲಿ ಸೇರಿದಂತೆ ಹಲವಾರು ಸಮಾಜದವರು ಹೋರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಕಾರ್ಯಕಾರಣಿ ಸಭೆಯಲ್ಲಿ ಚರ್ಚೆಯಾಗಿದೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಖ್ಯಮಂತ್ರಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಯತ್ನಾಳ್ ಶ್ಲಾಘನೆ ವ್ಯಕ್ತಪಡಿಸಿದರು.

ಇದನ್ನೂ ಓದಿ:ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ನೀಡದಿದ್ದರೆ ಬಿಜೆಪಿ ಪಕ್ಷ ಹಾಳಾಗಲಿದೆ : ಯತ್ನಾಳ್​ ಭವಿಷ್ಯ

ABOUT THE AUTHOR

...view details