ದಾವಣಗೆರೆ :ಹೋಳಿ ಹಬ್ಬಕ್ಕೆ ನಾನಾ ರೀತಿಯ ಸ್ಪರ್ಧೆಗಳು ಏರ್ಪಡಿಸುವುದು ವಾಡಿಕೆ. ಅದರಂತೆ ದಾವಣಗೆರೆಯಲ್ಲಿ ಮಿರ್ಚಿ-ಮಂಡಕ್ಕಿ ಸ್ಪರ್ಧೆ ನಡೆದು ಮಹಿಳೆಯರು, ಪುರುಷರೆನ್ನದೇ ಭಾಗವಹಿಸಿ ತಮ್ಮ 'ತಿನ್ನುವ ಸಾಮರ್ಥ್ಯ' ಸಾಬೀತುಪಡಿಸಿದರು.
ಬೆಣ್ಣೆನಗರಿಯಲ್ಲಿ ಮಜವಾದ ಸ್ಪರ್ಧೆ ನಗರದ ದುರ್ಗಾಂಬಿಕೆ ಜಾತ್ರೆ ಪ್ರಯುಕ್ತ ಜಿಲ್ಲಾ ಸಮಾಚಾರ ಪತ್ರಿಕೆ ಬಳಗದಿಂದ ಇಲ್ಲಿನ ರೋಟರಿ ಬಾಲಭವನದ ಆವರಣದಲ್ಲಿ ಮಿರ್ಚಿ ಮಂಡಕ್ಕಿ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಸಾಕಷ್ಟು ಯುವಕರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ನಾ ಮುಂದು ತಾ ಮುಂದು ಎಂಬಂತೆ ಮಂಡಕ್ಕಿ- ಮೆಣಸಿನಕಾಯಿ ಸೇವಿಸಿದರು.
ಆಯೋಜಕರು ನಿಗದಿ ಮಾಡಿದ ಸಮಯ ಮತ್ತು ಇಂತಿಷ್ಟು ಮಂಡಕ್ಕಿ-ಮಿರ್ಚಿ ತಿನ್ನಬೇಕು ಎಂಬ ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಥಮ ಬಹುಮಾನವಾಗಿ 3 ಸಾವಿರ, ದ್ವಿತೀಯ ಬಹುಮಾನಕ್ಕೆ 2 ಸಾವಿರ ಹಾಗೂ ತೃತೀಯ ಬಹುಮಾನವಾಗಿ 1 ಸಾವಿರ ರೂ. ನಗದು ಘೋಷಿಸಲಾಗಿತ್ತು.
ಮಂಡಕ್ಕಿ-ಮಿರ್ಚಿ ತಿನ್ನುವಾಗ ಗಂಟಲು ಕಟ್ಟಿಕೊಂಡು ಜನರು ನೀರು ಕುಡಿದು ಮತ್ತೆ ಸ್ಪರ್ಧೆಗೆ ಅಣಿಯಾಗುವುದು, ಅಲ್ಲದೇ, ಸುತ್ತಲಿನ ಜನರು ಚಪ್ಪಾಳೆ ತಟ್ಟಿ ಸ್ಪರ್ಧಾಳುಗಳನ್ನು ಹುರಿದುಂಬಿಸುವುದು ಸ್ಪರ್ಧೆಯ ಮಜಾ ಹೆಚ್ಚಿಸಿತ್ತು.
ಓದಿ:ಪೆಟ್ರೋಲ್ ಬೆಲೆ ಏರಿಕೆ ಬಿಸಿ.. ಕೆಲಸಕ್ಕೆ ಕುದುರೆ ಏರಿ ಹೊರಟ ಹಮ್ಮೀರ