ದಾವಣಗೆರೆ:ರಾಜ್ಯ ಸರ್ಕಾರದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ನಿನ್ನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಹಾಗು ಸುರಹೊನ್ನೆ ಗ್ರಾಮಗಳಿಂದ ಚಾಲನೆ ನೀಡಲಾಗಿದೆ. ಕುಂದೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಕಂದಾಯ ಸಚಿವ ಆರ್.ಅಶೋಕ್ ನಿನ್ನೆ ರಾತ್ರಿಯೇ ಮನೆ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಕುಂದೂರು ಗ್ರಾಮದ ರಂಗಮಂದಿರದ ಬಳಿ ಮಲಗಿದ್ದ ವೃದ್ಧರನ್ನು ಮಾತನಾಡಿಸಿದ ಸಚಿವ ಅಶೋಕ್, ವೃದ್ಧಾಪ್ಯ ವೇತನ ಸರಿಯಾಗಿ ಬರುತ್ತದೆಯೋ, ಇಲ್ಲವೋ ಎಂದು ವಿಚಾರಿಸಿದರು. ಬಳಿಕ ಗ್ರಾಮದ ಬಹುತೇಕ ಮನೆಗಳಿಗೆ ಭೇಟಿ ನೀಡಿದ ವೇಳೆ ಶಾಸಕ ಎಂ.ಪಿ.ರೇಣುಕಾಚಾರ್ಯ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ಹಲವರು ಸಾಥ್ ಕೊಟ್ಟರು.
ಕುಂದೂರು ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಭಜನೆ ಆಯೋಜಿಸಿದ್ದು, ಅಶೋಕ್ ಹಾಗು ರೇಣುಕಾಚಾರ್ಯ ಭಾಗಿಯಾಗಿದರು. ಈ ಸಂದರ್ಭದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಕುಂದೂರು ಗ್ರಾಮಸ್ಥರ ಜೊತೆ ಕಾಲ ಕಳೆದರು.