ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಬಗ್ಗೆ ಸಭೆ ನಡೆಸಿಲ್ಲ, ಈ ಬಗ್ಗೆ ಎದ್ದಿರುವ ವದಂತಿಗಳು ಶುದ್ಧ ಸುಳ್ಳು. ಜಿಲ್ಲೆಯ ಒಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು ನಿಜ ಎಂದು ಮಾಯಕೊಂಡ ಬಿಜೆಪಿ ಶಾಸಕ ಪ್ರೊ. ಲಿಂಗಣ್ಣ ಹೇಳಿದ್ದಾರೆ.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಸಭೆ ನಡೆಸಿಲ್ಲ: ಶಾಸಕ ಪ್ರೊ. ಲಿಂಗಣ್ಣ - ಭೈರತಿ ಬಸವರಾಜ್ ಅವರನ್ನು ಉಸ್ತುವಾರಿ ಸಚಿವ
ಭೈರತಿ ಬಸವರಾಜ್ ಅವರನ್ನು ಉಸ್ತುವಾರಿ ಸಚಿವ ಸ್ಥಾನದಿಂದ ಬದಲಾವಣೆ ಮಾಡಿ ಎಂದು ಎಲ್ಲಿಯೂ ಕೇಳಿಕೊಂಡಿಲ್ಲ, ಈ ಬಗ್ಗೆ ಸಭೆ ನಡೆಸಿಲ್ಲ. ನವದೆಹಲಿಗೆ ಸಿಎಂ ಯಡಿಯೂರಪ್ಪ ಶೀಘ್ರದಲ್ಲಿ ತೆರಳಲಿದ್ದಾರೆ. ಹೋಗಿ ಬಂದ ಬಳಿಕ ವಿಸ್ತರಣೆ ಆಗಲಿದೆ. ರೇಣುಕಾಚಾರ್ಯ ಮನೆಯಲ್ಲಿ ಸಭೆ ಸೇರಿದ್ದೆವು ಎನ್ನುವುದು ಶುದ್ಧ ಸುಳ್ಳು ಎಂದು ಲಿಂಗಣ್ಣ ಸ್ಪಷ್ಪಪಡಿಸಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಿಲ್ಲೆಯ ಒಬ್ಬರಿಗಾದರೂ ಸಚಿವ ಸ್ಥಾನ ನೀಡಿ ಎನ್ನುವುದಷ್ಟೇ ನಮ್ಮ ಬೇಡಿಕೆ ಮತ್ತು ಹಕ್ಕು. ಇದನ್ನು ಕೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಯಾರಿಗೆ ಸಚಿವ ಸ್ಥಾನ ಕೊಟ್ಟರೂ ನಮಗೆ ಸಂತೋಷ. ಇಂತವರಿಗೆ ನೀಡಿ ಎಂಬುದು ನಮ್ಮ ಬೇಡಿಕೆ ಅಲ್ಲ. ಸಂಪುಟ ವಿಸ್ತರಣೆ ವೇಳೆ ಬೇಡಿಕೆ ಪರಿಗಣಿಸುವಂತೆ ಮನವಿ ಸಲ್ಲಿಸಿದ್ದೇವೆ ಎಂದರು.