ಕರ್ನಾಟಕ

karnataka

ETV Bharat / city

ಯುದ್ಧಕ್ಕೆ ಹೋಗುವಾಗ ವೈರಿಗಳು ದುರ್ಬಲ ಆಗಿದ್ದಾರೆ ಎಂದುಕೊಳ್ಳಬಾರದು: ಬಿ.ಸಿ ಪಾಟೀಲ್

ಯುದ್ಧಕ್ಕೆ ಹೋಗುವಾಗ ವೈರಿಗಳು ದುರ್ಬಲ ಆಗಿದ್ದಾರೆ ಎಂದುಕೊಳ್ಳಬಾರದು. ಆಗ ಯುದ್ಧ ಗೆಲ್ಲಲು ಸಾಧ್ಯವಿಲ್ಲ. ಎದುರಾಳಿಗಳು ಪ್ರಬಲವಾಗಿದ್ದಾರೆ ಎಂದುಕೊಂಡಾಗ ಮಾತ್ರ ಯುದ್ದ ಗೆದ್ದು ಬರಲು ಸಾಧ್ಯ..

Minister BC Patil
ಬಿ.ಸಿ ಪಾಟೀಲ್

By

Published : Sep 19, 2021, 5:18 PM IST

ದಾವಣಗೆರೆ :ಕಾಂಗ್ರೆಸ್ ನವರು ಬಿಜೆಪಿ ಶಾಸಕರನ್ನ ಸೆಳೆಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆಯೇ ಹೊರತು ಒಬ್ಬರು ಇಬ್ಬರು ಎಂದು ಹೇಳಿಲ್ಲ ಎಂದು ಸಚಿವ ಬಿ ಸಿ ಪಾಟೀಲ್ ಸ್ಪಷ್ಟಪಡಿಸಿದರು.

ಆಪರೇಷನ್ ಹಸ್ತ ಕುರಿತಂತೆ ಸಚಿವ ಬಿ ಸಿ ಪಾಟೀಲ್ ಪ್ರತಿಕ್ರಿಯೆ ನೀಡಿರುವುದು..

ದಾವಣಗೆರೆಯಲ್ಲಿ ಮಾತನಾಡಿದ ಅವರು, ಯುದ್ಧಕ್ಕೆ ಹೋಗುವಾಗ ವೈರಿಗಳು ದುರ್ಬಲ ಆಗಿದ್ದಾರೆ ಎಂದುಕೊಳ್ಳಬಾರದು. ಆಗ ಯುದ್ಧ ಗೆಲ್ಲಲು ಸಾಧ್ಯವಿಲ್ಲ. ಎದುರಾಳಿಗಳು ಪ್ರಬಲವಾಗಿದ್ದಾರೆ ಎಂದುಕೊಂಡಾಗ ಮಾತ್ರ ಯುದ್ದ ಗೆದ್ದು ಬರಲು ಸಾಧ್ಯ ಎಂದರು.

ಕಾರ್ಯಕರ್ತರು ನಮ್ಮ ಸರ್ಕಾರ ಇದೆ ಎಂದುಕೊಂಡು ಮೈಮರೆಯಬಾರದು. 2013ರಲ್ಲಿ ಮೈಮರೆತದ್ದೇ ಸೋಲಲು ಕಾರಣವಾಗಿದೆ ಎಂದು ಬಿಜೆಪಿ ಕಾರ್ಯಕರ್ತರಿಗೆ ಸಂದೇಶ ರವಾನಿಸಿದರು.

ಕಾರ್ಯಕಾರಣಿ ಬಗ್ಗೆ ಮಾತನಾಡಿದ ಅವರು, ಸರ್ಕಾರದ ಸಾಧನೆ ಹಾಗೂ ಮುಂದಿನ ಕೆಲಸಗಳ ಬಗ್ಗೆ ಚರ್ಚೆಯಾಗಿದೆ. ಹಾಲಿ ಸಿಎಂ ಬೊಮ್ಮಾಯಿ, ಮಾಜಿ‌ ಸಿಎಂ ಯಡಿಯೂರಪ್ಪನವರ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ. ಸಂಘಟಿತವಾಗಿ ಕೆಲಸ ಮಾಡಬೇಕಾಗಿದೆ ಎಂದರು‌.

ಇದನ್ನೂ ಓದಿ:ಪ್ರತಿಪಕ್ಷಗಳಿಗೆ ಶಕ್ತಿ ತಂತ್ರಗಾರಿಕೆ ಇರುತ್ತದೆ, ಹಗುರವಾಗಿ ತೆಗೆದುಕೊಳ್ಳಬೇಡಿ: ಕಾರ್ಯಕರ್ತರಿಗೆ ಬಿಎಸ್​ವೈ ಸಂದೇಶ

ABOUT THE AUTHOR

...view details