ದಾವಣಗೆರೆ :ಜಿಲ್ಲೆಯ ಮಾಯಕೊಂಡ ಸರ್ಕಾರಿ ಐಟಿಐ ಕಾಲೇಜಿನ ವೃತ್ತಿ ಪ್ರಾಯೋಗಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ನಕಲು ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸರ್ಕಾರಿ ಐಟಿಐ ಕಾಲೇಜಿನಲ್ಲಿ ಆಗಸ್ಟ್ 3, 4 ರಂದು ನಡೆದ ಪ್ರಾಯೋಗಿಕ ಪರೀಕ್ಷೆಯಲ್ಲಿ ನಕಲು ನಡೆದಿದೆ ಎನ್ನಳಾಗ್ತಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳು ನಕಲು ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎರಡನೇ ವರ್ಷದ ಫಿಟ್ಟರ್ ಟ್ರೇಡ್ ಸೀನಿಯರ್ ಪ್ರಾಕ್ಟಿಕಲ್ ವಿಭಾಗದ ವೃತ್ತಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿದೆ ಎನ್ನಲಾಗ್ತಿದೆ. ಈ ಪ್ರಾಯೋಗಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ರಾಜಾರೋಷವಾಗಿ ಚೀಟಿ ಇಟ್ಟುಕೊಂಡು ನಕಲು ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ವಿದ್ಯಾರ್ಥಿಗಳಿಂದ ಮಾಯಕೊಂಡ ಐಟಿಐ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಕಾಳಚಾರ್ ಹಾಗು ಸಿದ್ದೇಶ್ ಇಬರಿಬ್ಬರು ಹಣ ಪಡೆದು ನಕಲು ಮಾಡಿಸಲು ಅವಕಾಶ ಕಲ್ಪಸಿದ್ದರು ಎಂಬ ಆರೋಪಗಳು ಕೇಳಿಬಂದಿವೆ.
ಐಟಿಐ ಕಾಲೇಜು ಉಪನ್ಯಾಸಕಿಗೆ ಕೊಲೆ ಬೆದರಿಕೆ:ಮಾಯಕೊಂಡ ಐಟಿಐ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿರುವ ರೇಖಾ ಅವರ ಮೇಲೆ ಪ್ರಭಾರಿ ಪ್ರಾಂಶುಪಾಲರಾದ ಕಾಳಚಾರ್ ಹಾಗು ಸಿದ್ದೇಶ್ ಎನ್ನುವವರು ಪರೀಕ್ಷೆಯಲ್ಲಿ ನಕಲು ಮಾಡಿಸಿದ ಪ್ರಕರಣವನ್ನು ಹೊರಿಸಲು ಯತ್ನ ನಡೆಸಿದ್ದಾರೆಂದು ರೇಖಾ ಅವರು ದೂರು ನೀಡಿದ್ದಾರೆ.