ದಾವಣಗೆರೆ:ಸಿಲಿಂಡರ್ ತುಂಬುವ ವೇಳೆ ಕಿಡಿ ತಗುಲಿ ಬೆಂಕಿ ಹೊತ್ತಿದ ಪರಿಣಾಮ ಕಾರೊಂದು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಹರಿಹರ ತಾಲೂಕಿನ ಮಲೇಬೆನ್ನೂರು ಬಳಿ ನಡೆದಿದೆ.
ಸಿಲಿಂಡರ್ ತುಂಬುವಾಗ ಗ್ಯಾಸ್ ಕಿಟ್ ಸ್ಫೋಟ: 20 ಅಡಿ ಎತ್ತರಕ್ಕೆ ಹಾರಿ ಬಿತ್ತು ಕಾರು! - ಹರಿಹರ ತಾಲೂಕಿನ ಮಲೇಬೆನ್ನೂರು ಬಳಿ ಕಾರು ಭಸ್ಮ
ಕಾರಿನ ಗ್ಯಾಸ್ ಕಿಟ್ ಸ್ಫೋಟಗೊಂಡ ಪರಿಣಾಮ ಭಾರಿ ಅನಾಹುತವೊಂದು ನಡೆದಿದೆ. ಕಾರು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ಬಳಿ ಸಂಭವಿಸಿದೆ.
ಗ್ಯಾಸ್ ಕಿಟ್ ಸ್ಘೋಟ
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾರಿನ ಚಾಲಕ ಮತ್ತು ಆತನ ಸಹಾಯಕ ಕಾರು ಬಿಟ್ಟು ದೂರ ಓಡಿ ಹೋಗಿದ್ದಾರೆ. ಸ್ವಲ್ಪ ಸಮಯದಲ್ಲೇ ಕಾರಿನ ಗ್ಯಾಸ್ ಕಿಟ್ ಸ್ಫೋಟಗೊಂಡು ಸುಮಾರು 20 ಅಡಿ ಮೇಲೆತ್ತರಕ್ಕೆ ವಾಹನ ಹಾರಿದೆ ಎನ್ನಲಾಗ್ತಿದೆ.
ಶಬ್ಧ ಕೇಳಿ ಅಕ್ಕ ಪಕ್ಕದ ಬಡಾವಣೆಗಳ ಜನರು ಸ್ಥಳಕ್ಕೆ ಧಾವಿಸಿ ನೋಡಿದಾಗ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಚಾಲಕ ಮತ್ತು ಸಹಾಯಕ, ವಾಹನ ಬಿಟ್ಟು ದೂರ ಓಡಿ ಹೋಗಿದ್ದಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಸಂಬಂಧ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.