ದಾವಣಗೆರೆ: ಈ ಚಡ್ಡಿ ದೇಶವನ್ನು ಕಾಯುತ್ತಿದೆ, ತಮ್ಮನ್ನು ತಾವು ಆರ್ಎಸ್ಎಸ್ನವರು ದೇಶಕ್ಕಾಗಿ ಅರ್ಪಿಸಿಕೊಂಡಿದ್ದಾರೆ ಎಂದು ಶಾಸಕ ಎಂ ಪಿ ರೇಣುಕಚಾರ್ಯ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ನವರು ಪ್ರಕೃತಿ ವಿಕೋಪ ಸೇರಿದಂತೆ ಬೇರೆ ಬೇರೆ ಸಂದರ್ಭದಲ್ಲಿ ಜನರನ್ನು ರಕ್ಷಣೆ ಮಾಡಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ನೀವು ಆರ್ಎಸ್ಎಸ್ ಕಚೇರಿಗೆ ಬನ್ನಿ, ಚಡ್ಡಿ ಹಾಕಿಕೊಳ್ಳಿ. ಆಗ ಆರ್ಎಸ್ಎಸ್ ಸಂಸ್ಕೃತಿ ನಿಮಗೆ ಗೊತ್ತಾಗುತ್ತೆ ಎಂದು ಸವಾಲು ಹಾಕಿದರು.
ಈ ಚಡ್ಡಿ ದೇಶವನ್ನು ಕಾಯುತ್ತಿದೆ, ಚಡ್ಡಿ ಸುಟ್ಟರೇ ನೀವು ಭಸ್ಮ ಆಗ್ತೀರಿ ಎಂದ ರೇಣುಕಾಚಾರ್ಯ ಆರ್ಎಸ್ಎಸ್ ದೇಶಾಭಿಮಾನ ಹೇಳಿಕೊಡುತ್ತೆ ಕಾಂಗ್ರೆಸ್ ಭಯೋತ್ಪಾದನೆ ಹೇಳಿಕೊಡುತ್ತೆ. ಭಯೋತ್ಪಾದಕರನ್ನು ಹಾಗೂ ಉಗ್ರಗಾಮಿಗಳನ್ನು ಕಾಂಗ್ರೆಸ್ನವರು ಅರಾಧಿಸುತ್ತಾರೆ. ಆರ್ಎಸ್ಎಸ್ ಚಡ್ಡಿ ಸುಟ್ಟರೆ ಸಿದ್ದರಾಮಯ್ಯನವರೇ ಭಸ್ಮ ಆಗುತ್ತಾರೆ. ಭಸ್ಮಾಸುರ ಕಥೆಯ ರೀತಿ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಭಸ್ಮ ಆಗುತ್ತಾರೆ ಎಂದರು.
ಇದನ್ನೂ ಓದಿ:ನೀವು ಯಾರದಾದರೂ ಚಡ್ಡಿ ಬಿಚ್ಚಿಸಿಕೊಳ್ಳಿ, ಜನರ ಚಡ್ಡಿ ಬಿಚ್ಚಿಸೋ ಕೆಲಸ ಮಾಡಬೇಡಿ: ಕುಮಾರಸ್ವಾಮಿ