ಹರಿಹರ: ತಾಲೂಕಿನ ಗುತ್ತೂರು ಗ್ರಾಮದ ಟ್ಯಾಕ್ಸಿ ಚಾಲಕ ಮಂಜುನಾಥ್ ಅವರ ಮಗನಾದ ಎಂ. ಅಭಿಷೇಕ್ ಎಸ್‌ಎಸ್‌ಎಲ್‌ಸಿ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿದ್ದಾನೆ. ಈ ಮೂಲಕ ಹರಿಹರ ತಾಲೂಕಿಗೆ ಹೆಮ್ಮೆ ತಂದಿದ್ದಾನೆ ಎಂದು ಶಾಸಕ ಎಸ್. ರಾಮಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಟೋ ಚಾಲಕನ ಮಗ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಫಸ್ಟ್: ಶಾಸಕರಿಂದ ಗುಣಗಾನ ಆಟೋ ಚಾಲಕ ಮಂಜುನಾಥ್ ಹಾಗೂ ನೇತ್ರಾವತಿಯ ಮೊದಲನೆಯ ಮಗನಾದ ಅಭಿಷೇಕ್ ನಗರದ ಎಂಕೆಇಟಿ ಪ್ರೌಡಶಾಲೆಯ ವಿದ್ಯಾರ್ಥಿಯಾಗಿದ್ದು, ಕೊರೊನಾ ಕರಿ ನೆರಳಿನಲ್ಲಿ ಜೂನ್ ತಿಂಗಳಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.
ತಂದೆ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ನಿವಾಸಿಯಾಗಿದ್ದು, ಕಳೆದ ಹಲವು ವರ್ಷಗಳಿಂದ ಟ್ಯಾಕ್ಸಿ ಚಾಲಕನಾಗಿ ಜೀವನ ಸಾಗಿಸುತ್ತಿದ್ದಾರೆ. ಈ ಬಡ ಕುಟುಂಬದಲ್ಲಿ ಅರಳಿದ ಈ ಪ್ರತಿಭೆಯು 1 ರಿಂದ 8ನೇ ತರಗತಿಯವರೆಗೂ ಗುತ್ತೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು ನಂತರ ಶಿಕ್ಷಕರ ಸೂಚನೆಯಂತೆ 9 ಹಾಗೂ 10ನೇ ತರಗತಿಯನ್ನು ನಗರದ ಕನ್ನಡ ಮಾಧ್ಯಮದ ಎಂಕೆಇಟಿ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾನೆ.
ಅಭಿಷೇಕ್ ನ ಮುಂದಿನ ವಿದ್ಯಾಭ್ಯಾಸ ಉತ್ತಮ ದಾರಿಯಲ್ಲಿಸಾಗಿ ಉನ್ನತ ಅಧಿಕಾರಿಯಾಗಿ ನಮ್ಮ ದೇಶ, ರಾಜ್ಯ, ಜಿಲ್ಲೆಗೆ ಬರಲಿ ಎಂದು ಶುಭ ಹಾರೈಸಿದರು.