ದಾವಣಗೆರೆ: ಲಾಕ್‌ಡೌನ್ ಉಲ್ಲಂಘಿಸಿದ 120ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು 590 ವಾಹನಗಳನ್ನು ಜಫ್ತಿ ಮಾಡಿಕೊಂಡಿದ್ದಾರೆ. ವಶಕ್ಕೆ ಪಡೆದವರಿಗೆ 'ಮತ್ತೆ ಆದೇಶ ಉಲ್ಲಂಘಿಸುವುದಿಲ್ಲ' ಎಂಬ ನಾಮಫಲಕ ಹಿಡಿದುಕೊಳ್ಳುವ ಶಿಕ್ಷೆ ನೀಡಲಾಗಿದೆ.
ಮುಂಜಾನೆಯಿಂದಲೇ ದಾಳಿ ನಡೆಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ ಅವರು ಲಾಕ್‌ಡೌನ್ ಆದೇಶ ಉಲ್ಲಂಘಿಸಿದವರನ್ನು ವಶಕ್ಕೆ ಪಡೆದುಕೊಂಡರು. ಬಳಿಕ ಅವರನ್ನು ನಗರದ ಡಿ.ಆರ್.ಮೈದಾನಕ್ಕೆ ಕರೆತರಲಾಯಿತು.
ನಾಮಫಲಕ ಹಿಡಿದು ನಿಂತುಕೊಳ್ಳುವ ಶಿಕ್ಷೆ 'ನಾನು ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಉಲ್ಲಂಘಿಸಿ ತಪ್ಪು ಮಾಡಿದ್ದೇನೆ'. 'ಮತ್ತೆ ಲಾಕ್‌ಡೌನ್ ಉಲ್ಲಂಘಿಸುವುದಿಲ್ಲ ಎಂಬ ನಾಮಫಲಕ ಹಿಡಿದು ನಿಲ್ಲುವ ಶಿಕ್ಷೆ ನೀಡಲಾಯಿತು.
ಜಿಲ್ಲಾಧಿಕಾರಿ ಮಹಾಂತೇಶ್ ಮಾತನಾಡಿ, ಆದೇಶ ಉಲ್ಲಂಘಿಸಿದರೆ ಯಾರು ಏನು ಮಾಡುತ್ತಾರೆ ಎಂಬುದನ್ನು ಈಗ ತೋರಿಸಿದ್ದೇವೆ. ಆರತಿ ಮಾಡಿದ್ದಾಗಿದೆ. ಮನೆಯಿಂದ ಹೊರ ಬರೆಬೇಡಿ ಎಂದು ಕೈ ಮುಗಿದಿದ್ದು ಆಯ್ತು, ನಮಸ್ಕರಿಸಿದ್ದು ಆಯ್ತು. ಇನ್ನು ಮುಂದೆ ಹೀಗೆಲ್ಲಾ ಹೇಳುವುದಿಲ್ಲ ಎಂದು ಎಚ್ಚರಿಸಿದರು.
ಲಾಕ್‌ಡೌನ್ ಉಲ್ಲಂಘಿಸಿದವರನ್ನು ವಶಕ್ಕೆ ಪಡೆದ ಪೊಲೀಸರು ಅನವಶ್ಯಕವಾಗಿ ಓಡಾಡುವವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಬೆಳಗ್ಗೆಯಿಂದಲೇ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದೇವೆ. ಏಪ್ರಿಲ್ 20ರವರೆಗೆ ಲಾಕ್‌ಡೌನ್ ಆದೇಶವನ್ನು ಪಾಲನೆ ಮಾಡಲೇಬೇಕು ಎಂದು ಹೇಳಿದರು. ಜಿಲ್ಲಾಡಳಿತ, ಎಸ್ಪಿ, ಎಸಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.