ಕರ್ನಾಟಕ

karnataka

ETV Bharat / city

ಸಂತ್ರಸ್ತರಿಗಾಗಿ ಮಂಜೂರಾಗಿದ್ದ ಜಮೀನು ವಿಕಲಚೇತನ ಮಕ್ಕಳ ಕಲಿಕಾ ಕೇಂದ್ರಕ್ಕೆ.. ಕೇಂದ್ರ ಸಚಿವರಿಗೆ ಘೇರಾವ್‌.. - ಜಿಲ್ಲಾಧಿಕಾರಿ ಆಂಜನ್ ಕುಮಾರ್

ಚಿಕ್ಕನಹಳ್ಳಿ ಆಶ್ರಯ ಸಂತ್ರಸ್ತರಿಗಾಗಿ ಮಂಜೂರು ಮಾಡಿದ್ದ ನಾಲ್ಕು ಎಕರೆ ಭೂಮಿಯಲ್ಲಿ ವಿಕಲಚೇತನ ಮಕ್ಕಳ ಕಲಿಕಾ ಕೇಂದ್ರ ‌ನಿರ್ಮಾಣ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣ ಆಗಿದೆ. ಎಲ್ಲಾ ಸಂತ್ರಸ್ತರಿಂದು ಶಿಲಾನ್ಯಾಸಕ್ಕಾಗಮಿಸಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿಯವರಿಗೆ ಘೇರವ್ ಹಾಕಿದರು..

Union Minister A. Narayanaswamy
ಕೇಂದ್ರ ಸಚಿವ ಎ.ನಾರಾಯಣಸ್ವಾಮಿಯವರಿಗೆ ಘೇರಾವ್ ಹಾಕಿದ ಸಂತ್ರಸ್ತರು

By

Published : Apr 16, 2022, 5:06 PM IST

ದಾವಣಗೆರೆ :2015ರಲ್ಲಿ ಅಂದಿನ ಜಿಲ್ಲಾಧಿಕಾರಿ ಆಂಜನ್ ಕುಮಾರ್ ಅವರು ಚಿಕ್ಕನಹಳ್ಳಿ ಆಶ್ರಯ ಸಂತ್ರಸ್ತರಿಗಾಗಿ ನಾಲ್ಕು ಎಕರೆ ಜಮೀನನ್ನು ಮಂಜೂರು ಮಾಡಿದ್ದರು. ಆದ್ರೇ, ಆ ಜಮೀನಿನಲ್ಲಿ ನಿವೇಶನಗಳನ್ನು ಮಾಡದೆ ಜಿಲ್ಲಾಡಳಿತ ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ಬುದ್ಧಿಮಾಂದ್ಯ ಮಕ್ಕಳ ತರಬೇತಿ ಕೇಂದ್ರ ನಿರ್ಮಾಣ ಮಾಡಲು ಭೂಮಿ ನೀಡಿರುವುದು ಆಕ್ರೋಶಕ್ಕೆ ಕಾರಣ ಆಗಿದೆ.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿಯವರಿಗೆ ಘೇರಾವ್ ಹಾಕಿದ ಸಂತ್ರಸ್ತರು..

ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯಡಿಯಲ್ಲಿ ದಾವಣಗೆರೆಯಲ್ಲಿ ಬುದ್ಧಿಮಾಂದ್ಯ ಮಕ್ಕಳ ತರಬೇತಿ ಕೇಂದ್ರ ನಿರ್ಮಾಣ ಮಾಡಬೇಕೆಂಬ ಕನಸು ನನಸಾಗುವಷ್ಟರಲ್ಲಿ ವಿಘ್ನ ಎದುರಾಗಿದೆ. ದಾವಣಗೆರೆ ತಾಲೂಕಿನ ವೊಡ್ಡಿನಹಳ್ಳಿ ಗ್ರಾಮದ ಬಳಿ ಈ ವಿಕಲಚೇತನ, ಬುದ್ಧಿಮಾಂದ್ಯ ಮಕ್ಕಳ ಕಲಿಕಾ ಹಾಗೂ ತರಬೇತಿ ಕೇಂದ್ರ ನಿರ್ಮಾಣಕ್ಕೆ ಶಿಲಾನ್ಯಾಸ ಕೂಡ ನಡೆದಿದೆ.

ಆದ್ರೇ, ಈ ಕೇಂದ್ರ ನಿರ್ಮಾಣ ಮಾಡುತ್ತಿರುವ ಜಮೀನು ಚಿಕ್ಕನಹಳ್ಳಿ ಆಶ್ರಯ ಸಂತ್ರಸ್ತರಿಗಾಗಿ ಮೀಸಲಿಟ್ಟ ಜಮೀನು, ಇದರಿಂದ ಸಂತ್ರಸ್ತರು ಆಕ್ರೋಶಿತರಾಗಿದ್ದಾರೆ. ಎಲ್ಲಾ ಸಂತ್ರಸ್ತರಿಂದು ಶಿಲಾನ್ಯಾಸಕ್ಕಾಗಮಿಸಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿಯವರಿಗೆ ಘೇರಾವ್ ಹಾಕಿದರು. ಚಿಕ್ಕನಹಳ್ಳಿ ಆಶ್ರಯ ಸಂತ್ರಸ್ತರಿಗಾಗಿ ಮಂಜೂರು ಮಾಡಿದ್ದ ನಾಲ್ಕು ಎಕರೆ ಭೂಮಿಯಲ್ಲಿ ವಿಕಲಚೇತನ ಮಕ್ಕಳ ಕಲಿಕಾ ಕೇಂದ್ರ ‌ನಿರ್ಮಾಣ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣ ಆಗಿದೆ.

ದಲಿತ ಮುಖಂಡ ಹೆಗ್ಗೆರೆ ರಂಗಪ್ಪ ಮಾತನಾಡಿ, ಚಿಕ್ಕನಹಳ್ಳಿ ಆಶ್ರಯ ಸಂತ್ರಸ್ತರಿಗಾಗಿ ಮೀಸಲಿಟ್ಟಿದ್ದ ಜಮೀನಿನಲ್ಲಿ ವಿಕಲಚೇತನ ಮಕ್ಕಳ ಕಲಿಕಾ ಕೇಂದ್ರ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ, ನಮಗೆ ಮೊದಲು ಪರ್ಯಾಯ ಜಮೀನು ಗುರುತಿಸಿ ಬಳಿಕ ಈ ಕೇಂದ್ರ ನಿರ್ಮಾಣ ಮಾಡಿ ಎಂದು ಒತ್ತಾಯಿಸಿದರು. 30 ಕಿ.ಮೀ ದೂರದಲ್ಲಿರುವ ಲಿಂಗದಹಳ್ಳಿ ಬಳಿ ಆಶ್ರಯ ಯೋಜನೆಗಾಗಿ ಜಮೀನು ನೀಡಲು ಜಿಲ್ಲಾಡಳಿತ ತಿಳಿಸಿದೆ. ಆದರೆ, ನಮಗೆ ದಾವಣಗೆರೆ ನಗರದ ಸುತ್ತಮುತ್ತ ಬೇಕು. ಇದರಲ್ಲಿ ಜಿಲ್ಲಾಧಿಕಾರಿ ಪಾತ್ರ ಬಹುಮುಖ್ಯವಾಗಿದೆ ಎಂದರು.

ಡಿಎಸ್ಎಸ್ ಸಂಚಾಲಕ ದುಗ್ಗಪ್ಪ ಮಾತನಾಡಿ, ಇಂದಿಗು ಕೂಡ ಎಪಿಎಂಸಿ ಹಿಂಭಾಗದಲ್ಲಿ ಗುಡಿಸಲು ಹಾಕಿಕೊಂಡು ಚಿಕ್ಕನಹಳ್ಳಿ ಆಶ್ರಯ ಸಂತ್ರಸ್ತರು ಜೀವನ ನಡೆಸುತ್ತಿದ್ದಾರೆ. ಅವರ ಕಷ್ಡ ನೋಡಲಾರದೆ ಕಳೆದ 2015ರಲ್ಲಿ ಅಂದಿನ ಜಿಲ್ಲಾಧಿಕಾರಿ ಅಂಜನ್ ಕುಮಾರ್ ಅವರು ವೊಡ್ಡಿನಹಳ್ಳಿ ಬಳಿ 4 ಎಕರೆ ಜಮೀನು ನೀಡಿದ್ದರು. ಆದರೆ, ಇಂದಿನ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ವಿಕಲಚೇತನ ಹಾಗೂ ಬುದ್ಧಿಮಾಂದ್ಯತೆಯ ಮಕ್ಕಳ ಕಲಿಕಾ, ತರಬೇತಿ ಕೇಂದ್ರಕ್ಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತುಂಡು ಭೂಮಿಗಾಗಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದವರು ನಿವೇಶನಕ್ಕಾಗಿ ಇಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರಿಗೆ ಘೇರಾವ್ ಹಾಕಿದ್ರು. ವಿಚಾರ ತಿಳಿದ ಸಚಿವರು, ಒಂದು ಒಳ್ಳೆ ಜಮೀನು ನೋಡಿ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಇದನ್ನೂ ಓದಿ:ಜಮೀನು ಪಹಣಿ ದೋಷ: ಕಲಬುರಗಿ ಅನ್ನದಾತರು ಕಂಗಾಲು

ABOUT THE AUTHOR

...view details