ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ವಿಶೇಷ ರೈಲಿನಲ್ಲಿ ಅಭಿಮಾನಿಗಳು ದಾವಣಗೆರೆ ಬಂದಿಳಿದ್ದಾರೆ. ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ವಿಶೇಷ ರೈಲಿನ ಮೂಲಕ ಬೆಣ್ಣೆ ನಗರಿಗೆ ಆಗಮಿಸಿದ ಸಾವಿರಾರು ಜನರು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆ ಹಾಕಿದ್ರು.
ಸಿದ್ದರಾಮಯ್ಯ ಉತ್ಸವ: ಬೀದರ್, ಬೆಳಗಾವಿಯಿಂದ ವಿಶೇಷ ಟ್ರೈನ್ನಲ್ಲಿ ಆಗಮಿಸಿದ ಫ್ಯಾನ್ಸ್.. ಬಾದಾಮಿಯಿಂದಲೇ ಲಕ್ಷಾಂತರ ಜನ ಕಾರ್ಯಕ್ರಮದಲ್ಲಿ ಭಾಗಿ! - ಸಿದ್ದರಾಮಯ್ಯ ಅಮೃತ ಮಹೋತ್ಸವ ಸುದ್ದಿ
ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಬಸ್, ಜೀಪ್ ಸೇರಿದಂತೆ ವಿಶೇಷ ಟ್ರೈನ್ಗಳ ಮೂಲಕ ಲಕ್ಷಾಂತರ ಜನರು ಆಗಮಿಸಿದ್ದಾರೆ.
ಬೀದರ್ ಬಾದಾಮಿ
ಬೀದರ್ ಜಿಲ್ಲೆಯಿಂದ ಹೊರಟ ವಿಶೇಷ ರೈಲು ದಾವಣಗೆರೆ ತಲುಪಿದೆ. ಇನ್ನು ಇದಲ್ಲದೇ ಬಾಗಲಕೋಟೆ ಜಿಲ್ಲೆಯ ಬಾದಾಮಿ ಹಾಗೂ ಬೆಳಗಾವಿ ಜಿಲ್ಲೆಯ ವಿಶೇಷ ಟೈನ್ನಲ್ಲಿ ಸಿದ್ದು ಅಭಿಮಾನಿಗಳು ಆಗಮಿಸಿದರು. ಬಾದಾಮಿಯಿಂದಲೇ ಒಂದು ಲಕ್ಷಾ ಜನ ಆಗಮಿಸಿದ್ದು, ಬಸ್, ಟ್ರೈನ್ಗಳ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಹಾವೇರಿಯಲ್ಲಿ ಹಾಗೂ ದಾವಣಗೆರೆ ನಗರದಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಓದಿ:ಸಿದ್ದರಾಮಯ್ಯ ಅಮೃತ ಮಹೋತ್ಸವ: ಮಾಜಿ ಸಚಿವೆ ಉಮಾಶ್ರೀ ಹೇಳಿದ್ದೇನು?