ಕರ್ನಾಟಕ

karnataka

ETV Bharat / city

ಕುಮಾರಸ್ವಾಮಿ ಲಾಟರಿ ಮುಖ್ಯಮಂತ್ರಿಯಾಗಿದ್ದರು : ಶಾಸಕ ಎಂ ಪಿ ರೇಣುಕಾಚಾರ್ಯ - ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ

ಕುಮಾರಸ್ವಾಮಿಗೆ 2006ರಲ್ಲಿ ಬಿಜೆಪಿ ಅಸ್ತಿತ್ವ ಕೊಟ್ಟಿತು, ಆಗ ಕುಮಾರಸ್ವಾಮಿ ವಚನ ಭ್ರಷ್ಟರಾದರು, ವಚನ ಭ್ರಷ್ಟರಾದ ಮೇಲೆ ಕುಮಾರಸ್ವಾಮಿ ರಾಜಕೀಯ ಜೀವನ ಹೀನಾಯವಾಯಿತು..

ರೇಣುಕಚಾರ್ಯ
ರೇಣುಕಚಾರ್ಯ

By

Published : Dec 10, 2020, 9:46 PM IST

Updated : Dec 11, 2020, 1:22 AM IST

ದಾವಣಗೆರೆ :ಕಾಂಗ್ರೆಸ್-ಜೆಡಿಎಸ್ ಸೇರಿ ಕುಮಾರಸ್ವಾಮಿ ಲಾಟರಿ ಮುಖ್ಯಮಂತ್ರಿಯಾಗಿದ್ದರು ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ಮಾಜಿ‌ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಇವರು ಅರೆಂಜ್ ಮ್ಯಾರೇಜ್ ಅಲ್ಲ ಅನೈತಿಕ ಸಂಬಂಧದಿಂದ ಸಿಎಂ ಆದವರು, ಕಾಂಗ್ರೆಸ್ ಶಾಸಕರು ಹೊರ ಹೋಗುವಂತೆ ಕಾಂಗ್ರೆಸ್ ನಾಯಕರೆ ಮಾಡಿದರು. ಯಾಕೆಂದರೆ, ಹಿಂದೆ ಕುಮಾರಸ್ವಾಮಿ ಇವರಿಗೆ ಮೋಸ ಮಾಡಿದ್ದರು.

ಆದರೆ, ಕುಮಾರಸ್ವಾಮಿಗೆ 2006ರಲ್ಲಿ ಬಿಜೆಪಿ ಅಸ್ತಿತ್ವ ಕೊಟ್ಟಿತು, ಆಗ ಕುಮಾರಸ್ವಾಮಿ ವಚನ ಭ್ರಷ್ಟರಾದರು, ವಚನ ಭ್ರಷ್ಟರಾದ ಮೇಲೆ ಕುಮಾರಸ್ವಾಮಿ ರಾಜಕೀಯ ಜೀವನ ಹೀನಾಯವಾಯಿತು ಎಂದು ವಾಗ್ದಾಳಿ ನಡೆಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎಂ ಪಿ ರೇಣುಕಾಚಾರ್ಯ

ಕುಮಾರಸ್ವಾಮಿ 37 ಸ್ಥಾನ ಪಡೆದು ಲಾಟ್ರಿ ಮುಖ್ಯಮಂತ್ರಿಯಾದ್ರು. ಅವರ ಪಕ್ಷದ ಶಾಸಕರೇ ಬೇಸತ್ತು ಬಿಜೆಪಿ ಕಡೆ ಬಂದಾಗ ನಾವು ಸರ್ಕಾರ ರಚನೆ ಮಾಡಿದ್ದೇವೆ. ಕುಮಾರಸ್ವಾಮಿಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಇದೀಗ ಬಂದಿದ್ದು, ಕಾಂಗ್ರೆಸ್ ಸ್ಥಿತಿ ಮೋಹಿನಿ ಭಸ್ಮಾಸುರನ ಕಥೆಯಾಗಿದೆ ಎಂದು ನಗೆ ಚಟಾಕಿ ಹಾರಿಸಿದರು.

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನಕಲಿ ಹಿಂದುಗಳು, ನಾವು ಎದೆ ತಟ್ಟಿಕೊಂಡು ಹೇಳುತ್ತೇವೆ ನಾವು ಹಿಂದುತ್ವದ ಪ್ರತಿಪಾದಕರು, ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ನಿಷೇಧ ಮಸೂದೆಯನ್ನು ಮಂಡಿಸಿಯೇ ಮಂಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲ್ ಹಾಕಿದರು.

Last Updated : Dec 11, 2020, 1:22 AM IST

ABOUT THE AUTHOR

...view details