ಕರ್ನಾಟಕ

karnataka

ETV Bharat / city

ದಾವಣಗೆರೆ: ಹರನಹಳ್ಳಿ ಕೆಂಗಾಪುರ ಗ್ರಾಮಕ್ಕೆ ಕೊನೆಗೂ ಬಂದ ಬಸ್​.. ಪೂಜೆ ಮಾಡಿ ಗ್ರಾಮಸ್ಥರ ಹರ್ಷ - ಹರನಹಳ್ಳಿ ಕೆಂಗಾಪುರ ಗ್ರಾಮಕ್ಕೆ ಬಸ್​

ದಾವಣಗೆರೆ ಜಿಲ್ಲೆಯ ಹರನಹಳ್ಳಿ ಕೆಂಗಾಪುರ ಗ್ರಾಮಕ್ಕೆ ಸರ್ಕಾರಿ ಬಸ್​ ಸಂಚಾರ ಆರಂಭಿಸಿದೆ. ಇದು ಅಲ್ಲಿನ ಜನರ ಹರ್ಷಕ್ಕೆ ಕಾರಣವಾಗಿದ್ದು, ಪೂಜೆ ಮಾಡಿ ಚಾಲನೆ ನೀಡಲಾಗಿದೆ.

ಹರನಹಳ್ಳಿ ಕೆಂಗಾಪುರ ಗ್ರಾಮಕ್ಕೆ ಕೊನೆಗೂ ಬಂದ ಬಸ್
ಹರನಹಳ್ಳಿ ಕೆಂಗಾಪುರ ಗ್ರಾಮಕ್ಕೆ ಕೊನೆಗೂ ಬಂದ ಬಸ್

By

Published : Jul 2, 2022, 8:17 AM IST

ದಾವಣಗೆರೆ:ಜಿಲ್ಲೆಯ ಚನ್ನಗಿರಿ ತಾಲೂಕಿನ ಹರನಹಳ್ಳಿ ಕೆಂಗಾಪುರ ಗ್ರಾಮಕ್ಕೆ ಕೊನೆಗೂ ಸರ್ಕಾರಿ ಬಸ್​ ಬಂದಿದೆ. ಇದು ಅಲ್ಲಿನ ಜನರ ಹಲವು ವರ್ಷಗಳ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ. ಗ್ರಾಮಕ್ಕೆ ಬಂದ ಬಸ್​ಗೆ ಪೂಜೆ ಮಾಡಿ ಹರ್ಷ ವ್ಯಕ್ತಪಡಿಸಲಾಗಿದೆ.

ಚನ್ನಗಿರಿ ತಾಲೂಕು ಕಬ್ಬಳ, ಹರನಹಳ್ಳಿ, ಕೆಂಗಾಪುರ, ಕಣಿವೆ ಬಿಳಚಿ ಮತ್ತು ಬಸವಪಟ್ಟಣ, ದಾಗಿನಕಟ್ಟೆಯ ಮಾರ್ಗವಾಗಿ ಕೆಎಸ್​ಆರ್​ಟಿಸಿ ಬಸ್​ ಸಂಚಾರವೇ ಇರಲಿಲ್ಲ. ಇದರ ವಿರುದ್ಧ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿ ಪ್ರತಿಭಟಿಸಿದರೂ ಪ್ರಯೋಜನವಾಗಿರಲಿಲ್ಲ.

ಹರನಹಳ್ಳಿ ಕೆಂಗಾಪುರ ಗ್ರಾಮಕ್ಕೆ ಕೊನೆಗೂ ಬಂದ ಬಸ್​ಹರನಹಳ್ಳಿ ಕೆಂಗಾಪುರ ಗ್ರಾಮಕ್ಕೆ ಕೊನೆಗೂ ಬಂದ ಬಸ್​ಹರನಹಳ್ಳಿ ಕೆಂಗಾಪುರ ಗ್ರಾಮಕ್ಕೆ ಕೊನೆಗೂ ಬಂದ ಬಸ್​

ಬಸ್ ಇಲ್ಲದೇ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದರು. ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ತೆರಳಬೇಕಾದರೆ ನಡೆದುಕೊಂಡೋ ಅಥವಾ ಖಾಸಗಿ ವಾಹನಗಳನ್ನೇ ನೆಚ್ಚಿಕೊಳ್ಳಬೇಕಾಗಿತ್ತು.‌ ಇದೀಗ‌ ಆ ಸಮಸ್ಯೆ ದೂರವಾಗಿದೆ. ಈ ಗ್ರಾಮಗಳ ಮಾರ್ಗವಾಗಿ ಸಾರಿಗೆ ಬಸ್ ಸಂಚಾರ ಶುರುವಾಗಿದೆ. ಇದು ಗ್ರಾಮಸ್ಥರ ಹರ್ಷಕ್ಕೆ ಕಾರಣವಾಗಿದೆ.

ಹರನಹಳ್ಳಿ ಕೆಂಗಪುರ ಗ್ರಾಮಕ್ಕೆ ಬರುವ ಕೆಎಸ್ಆರ್​ಟಿಸಿ ಬಸ್, ಈ ಗ್ರಾಮಗಳ ಮಾರ್ಗವಾಗಿ ಹೊನ್ನಾಳ್ಳಿಗೆ ಸಂಚರಿಸುತ್ತದೆ. ಹರನಹಳ್ಳಿ ಕೆಂಗಾಪುರಕ್ಕೆ ಆಗಮಿಸಿದ ಬಸ್​ಗೆ ರಾಮಲಿಂಗೇಶ್ವರ ಮಠದ ಸ್ವಾಮೀಜಿಗಳು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪೂಜೆ ಮಾಡಿ ಚಾಲನೆ ನೀಡಿದರು. ಇದೇ ವೇಳೇ ಸಾರಿಗೆ ಇಲಾಖೆಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.

ಓದಿ:ಸಿಲಿಕಾನ್ ಸಿಟಿಯಲ್ಲಿ ಮೊದಲ ಬಾರಿಗೆ ಏಷ್ಯಾ ಒಷೇನಿಯಾ ಅಲ್ಟ್ರಾ ರನ್ನಿಂಗ್ ಚಾಂಪಿಯನ್​ಶಿಪ್

ABOUT THE AUTHOR

...view details