ದಾವಣಗೆರೆ :ಸರ್ಕಾರ ಪರಿಶಿಷ್ಟ ವರ್ಗದ ಮಕ್ಕಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅ ಯೋಜನೆಗಳ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯವೂ ಒಂದು. ಇಲ್ಲೊಬ್ಬ ವಾರ್ಡನ್ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚು ತೋರಿಸಿ ಸರ್ಕಾರಿ ಅನುದಾನವನ್ನು ಸ್ವಾಹ ಮಾಡುತ್ತಿದ್ದ ಪ್ರಕರಣವನ್ನು ತಹಶೀಲ್ದಾರ್ ಬಯಲಿಗೆಳೆದಿದ್ದಾರೆ.
ಜಿಲ್ಲೆ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ಮೇಲೆ ಚನ್ನಗಿರಿ ತಹಶೀಲ್ದಾರ್ ಪಟ್ಟರಾಜ ಗೌಡ ಅವರು ದಿಢೀರ್ ದಾಳಿ ಮಾಡಿ ಅಕ್ರಮ ಬಯಲಿಗೆ ತಂದಿದ್ದಾರೆ. ಕೆರೆಬಿಳಚಿ ಗ್ರಾಮದಲ್ಲಿರುವ ಬಾಲಕಿಯರ ಹಾಸ್ಟೆಲ್ನಲ್ಲಿ 35 ವಿದ್ಯಾರ್ಥಿನಿಯರು ನೋಂದಣಿಯಾಗಿದ್ದರು. ಆದ್ರೇ ಆಘಾತಕಾರಿ ವಿಚಾರ ಏನಂದ್ರೇ ಅ ಹಾಸ್ಟೆಲ್ನಲ್ಲಿದ್ದಿದ್ದು ಕೇವಲ 4 ವಿದ್ಯಾರ್ಥಿನಿಯರು ಮಾತ್ರ. ಹಾಸ್ಟೆಲ್ನ ವಾರ್ಡನ್ ಹಾಗೂ ಸಿಬ್ಬಂದಿ ಇದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಬಂದ ಅನುದಾನ ಎಲ್ಲಾ ಗುಳುಂ ಮಾಡಿದ್ದಾರೆ.
35 ವಿದ್ಯಾರ್ಥಿನಿಯರ ಹಾಜರಾತಿ ತೋರಿಸಿ ಅವರಿಗೆ ನೀಡುತ್ತಿದ್ದ ಅನುದಾನವನ್ನು ಸ್ವಾಹ ಮಾಡಿದ್ದಾರೆ. ಸತತ ಮೂರು ವರ್ಷಗಳಿಂದ ಇದೇ ಚಾಳಿ ಮುಂದುವರೆಸುತ್ತಿದ್ದಾರೆ ಎಂಬುದು ವಿದ್ಯಾರ್ಥಿನಿಯರ ಹಾಗೂ ಸ್ಥಳೀಯ ನಿವಾಸಿಗಳ ಆರೋಪವಾಗಿದೆ. ಮಾಹಿತಿ ಪಡೆದು ಹಾಸ್ಟೆಲ್‌ಗೆ ದಿಢೀರ್ ಭೇಟಿ ನೀಡಿದ ತಹಶೀಲ್ದಾರ್ ಪಟ್ಟರಾಜ ಗೌಡ ನೇತೃತ್ವದ ತಂಡ ಅಲ್ಲಿರುವ ಅವ್ಯವಸ್ಥೆ ಕಂಡು ದಂಗಾಗಿದ್ರು.