ದಾವಣಗೆರೆ :ಹರಿಹರ ನಗರಸಭೆಯಲ್ಲಿ ಜೆಡಿಎಸ್ 14 ಕ್ಷೇತ್ರಗಳಲ್ಲಿ ಜಯಗಳಿಸಿದ್ದು ಖುಷಿ ತಂದಿದೆ. ಹರಿಹರ ನಗರಸಭೆಯಲ್ಲಿ ಜೆಡಿಎಸ್ ಅಧಿಕಾರ ನಡೆಸಲಿದೆ ಎಂದು ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್ ಹೇಳಿದ್ದಾರೆ.
ಹರಿಹರದಲ್ಲಿ ತೆನೆ ಹೊತ್ತ ಮಹಿಳೆಯ ಅಧಿಕಾರ.. ಮತದಾರನ ಮನಸ್ಸು ತಿಳಿಯೋದ್ ಕಷ್ಟ.. - undefined
ಹರಿಹರ ನಗರಸಭೆಯಲ್ಲಿ ಜೆಡಿಎಸ್ಗೆ ಅಧಿಕಾರ ನಡೆಸಲು ಮತದಾರ ಅವಕಾಶ ಮಾಡಿಕೊಟ್ಟಿದ್ದಾನೆ. ಜಿಲ್ಲಾಧ್ಯಕ್ಷರು ಹಾಗೂ ಕಾರ್ಯಕರ್ತರ ಪರಿಶ್ರಮದಿಂದ ಜೆಡಿಎಸ್ ಜಯಗಳಿಸಿದೆ. ಇಲ್ಲಿ ಲೋಕಸಭಾ ಚುನಾವಣೆ ಯಾವುದೇ ಪ್ರಭಾವ ಬೀರಿಲ್ಲ ಎಂದು ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್ ತಿಳಿಸಿದ್ದಾರೆ.
ಹರಿಹರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಹರದಲ್ಲಿ 14 ಸೀಟು ಜಯಗಳಿಸುವ ಮೂಲಕ ಮತ್ತೆ ಜೆಡಿಎಸ್ ಅಧಿಕಾರ ನಡೆಸುವತ್ತ ಹೆಜ್ಜೆ ಇರಿಸಿದೆ. ಕಾಂಗ್ರೆಸ್ 10 ಸ್ಥಾನ ಪಡೆದಿದೆ. ಮೈತ್ರಿ ಧರ್ಮದಂತೆ ಕಾಂಗ್ರೆಸ್ ನಮಗೆ ಸಪೋರ್ಟ್ ಮಾಡಲಿದೆ ಎಂದು ತಿಳಿಸಿದರು.
ಮೀನಿನ ಹೆಜ್ಜೆ ತಿಳಿಯಬಹುದು. ಆದರೆ, ಮತದಾರನ ಮನಸ್ಸು ತಿಳಿಯಲಾಗುತ್ತಿಲ್ಲ. ಯಾವ ಮಾನದಂಡದ ಮೇಲೆ ಮತದಾರ ಮತ ಹಾಕುತ್ತಾನೆ ಗೊತ್ತಾಗಲ್ಲ. ನಾವೂ ಇನ್ನೂ ಹೆಚ್ಚಿನ ಕ್ಷೇತ್ರ ಗೆಲ್ಲುವ ಗುರಿ ಇರಿಸಿಕೊಂಡಿದ್ದೆವು. ಈ ಮೂಲಕ ಮತದಾರ ಎಚ್ಚರಿಕೆ ಗಂಟೆಯನ್ನು ಸಹ ಕೊಟ್ಟಿದ್ದಾನೆ. ಜೊತೆಗೆ ಹರಿಹರ ಜೆಡಿಎಸ್ಗೆ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾನೆ. ಜಿಲ್ಲಾಧ್ಯಕ್ಷರು ಹಾಗೂ ಕಾರ್ಯಕರ್ತರ ಪರಿಶ್ರಮದಿಂದ ಜೆಡಿಎಸ್ ಜಯಗಳಿಸಿದೆ. ಇಲ್ಲಿ ಲೋಕಸಭಾ ಚುನಾವಣೆ ಯಾವುದೇ ಪ್ರಭಾವ ಬೀರಿಲ್ಲ ಎಂದು ತಿಳಿಸಿದರು.