ದಾವಣಗೆರೆ:ಪ್ರಸ್ತುತ ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ದರ ಗಗನಕ್ಕೇರಿದೆ. ಇದರಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ದಾವಣಗೆರೆಯ ಜೈನ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಅನುಪಯುಕ್ತ ಪ್ಲಾಸ್ಟಿಕ್ ಮೂಲಕ ಪೆಟ್ರೋಲ್ ತೆಗೆಯುವ ಯಂತ್ರ ತಯಾರಿಸಿದ್ದಾರೆ.
ಡಾ. ರಮೇಶ್ ನೀಡಿರುವ ಸಲಹೆ ಪಡೆದ ಮೋಹನ್ ಕುಮಾರ್, ಮೋಹನ್ ನಾಯಕ್ ಮತ್ತು ನಯನ ಈ ಮಾದರಿಯನ್ನು ತಯಾರಿಸಿದ್ದಾರೆ. ಅನುಪಯುಕ್ತ ಪ್ಲಾಸ್ಟಿಕ್ ಅನ್ನು ಚಿಕ್ಕದಾಗಿ ತುಂಡು ಮಾಡಿ 400 ಡಿಗ್ರಿ ತಾಪಮಾನದಲ್ಲಿ ಕಾಯಿಸಲಾಗುತ್ತದೆ. ಅದರಿಂದ ಉತ್ಪತ್ತಿಯಾಗುವ ಕಂಡೆನ್ಸರ್ ಗ್ಯಾಸ್ ಹಾಗು ಹೈಡ್ರೋಕಾರ್ಬೋ ಮೂಲಕ ಪೆಟ್ರೋಲ್ ಪಡೆಬಹುದು. ಈ ಪೆಟ್ರೋಲ್ ಅನ್ನು 2 ಹಾಗು 4 ಸ್ಟ್ರೋಕ್ ಎಂಜಿನ್ಗಳಲ್ಲಿ ಬಳಸಬಹುದಾಗಿದೆ.