ದಾವಣಗೆರೆ: ಹೆಲಿಪ್ಯಾಡ್ನಲ್ಲಿ ಸಿಎಂ ಆಗಮನ ಹಿನ್ನೆಲೆ ನಿರ್ಮಿಸಿದ್ದ ಪೆಂಡಾಲ್ ಜೋರಾಗಿ ಗಾಳಿ ಬೀಸಿದ ಹಿನ್ನೆಲೆಯಲ್ಲಿ ಕುಸಿದಿದ್ದು, ಪೊಲೀಸರು ಗಲಿಬಿಲಿಗೊಂಡ ಘಟನೆ ಹೊನ್ನಾಳಿ ಪಟ್ಟಣದ ಕಡದಕಟ್ಟೆಯಲ್ಲಿ ನಡೆದಿದೆ.
ಸಿಎಂ ಆಗಮಿಸುವ ಮುನ್ನವೇ ಜೋರಾಗಿ ಬೀಸಿದ ಗಾಳಿಗೆ ಪೆಂಡಾಲ್ ಕುಸಿತ: ತಪ್ಪಿದ ಅನಾಹುತ - ಗಾಳಿಯ ತೀವ್ರತೆಗೆ ಪೆಂಡಾಲ್ ಧರೆಗುರುಳಿದೆ
ಹೆಲಿಪ್ಯಾಡ್ನಲ್ಲಿ ಸಿಎಂ ಆಗಮನ ಹಿನ್ನೆಲೆ ನಿರ್ಮಿಸಿದ್ದ ಪೆಂಡಾಲ್ ಜೋರಾಗಿ ಗಾಳಿ ಬೀಸಿದ ಹಿನ್ನೆಲೆಯಲ್ಲಿ ಕುಸಿದಿದ್ದು, ಪೊಲೀಸರು ಗಲಿಬಿಲಿಗೊಂಡ ಘಟನೆ ಹೊನ್ನಾಳಿ ಪಟ್ಟಣದ ಕಡದಕಟ್ಟೆಯಲ್ಲಿ ನಡೆದಿದೆ.
ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಕೃಷಿ ಮೇಳದಲ್ಲಿ ಪಾಲ್ಗೊಳ್ಳಲು ಸಿಎಂ ಯಡಿಯೂರಪ್ಪ ಹಾವೇರಿಯಿಂದ ದಾವಣಗೆರೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸುತ್ತಿದ್ದ ಕಾರಣ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಈ ವೇಳೆ ಜೋರಾಗಿ ಬೀಸಿದ ಗಾಳಿಯಿಂದಾಗಿ ಸ್ಥಳದಲ್ಲಿದ್ದ ಪೊಲೀಸರು, ಅಧಿಕಾರಿಗಳು ಒಂದು ಕ್ಷಣ ಆತಂಕಕ್ಕೊಳಗಾದರು.
ಗಾಳಿಯ ತೀವ್ರತೆಗೆ ಪೆಂಡಾಲ್ ಧರೆಗುರುಳಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪೊಲೀಸರು ಸಿಡಿಮಿಡಿಗೊಂಡರು. ಸ್ಥಳದಲ್ಲಿಯೇ ಇದ್ದ ಪೊಲೀಸರು ಕುಸಿದು ಬಿದ್ದ ಪೆಂಡಾಲ್ಅನ್ನು ಮತ್ತೆ ಸರಿಪಡಿಸಿದರು.