ದಾವಣಗೆರೆ: ನಗರದ ಬೇತೂರು ರಸ್ತೆ ಚೆಕ್ ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 14 ಲಕ್ಷದ 20 ಸಾವಿರ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ದಾವಣಗೆರೆಯಲ್ಲಿ ದಾಖಲೆ ಇಲ್ಲದೆ ನಗದು ಸಾಗಾಟ: 14 ಲಕ್ಷ ರೂ. ವಶ - undefined
ದಾಖಲೆ ಇಲ್ಲದೆ ಸಾಗಿಸುತ್ತಿದ್ದ 14 ಲಕ್ಷದ 20 ಸಾವಿರ ರೂ. ಹಣ ವಶಕ್ಕೆ. ಎಫ್ಎಸ್ಟಿ ತಂಡದಿಂದ ಹಣ ವಶಕ್ಕೆ.

ವಶಕ್ಕೆ ಪಡೆದ ಹಣ
ಹೋಂಡಾ ಶೈನ್ ಬೈಕ್ನಲ್ಲಿ ಬಸವರಾಜ್ ಎಂಬುವವರು ಹಣ ಸಾಗಿಸುತ್ತಿದ್ದ ವೇಳೆ ಎಫ್ಎಸ್ಟಿ ತಂಡದವರು ತಡೆದು ದಾಖಲಾತಿ ತೋರಿಸುವಂತೆ ಕೇಳಿದ್ದಾರೆ. ಆದರೆ ಬಸವರಾಜ್ ಸೂಕ್ತ ದಾಖಲಾತಿ ನೀಡಲಿಲ್ಲ. ಬಳಿಕ ಫ್ಲೈಯಿಂಗ್ ಸ್ಕ್ವಾಡ್ ಟೀಂನ ಮುಖ್ಯಸ್ಥ ರವಿ, ಗಂಗಾಧರ, ಕೃಷ್ಣನಾಯ್ಕ್, ಬಸವರಾಜು, ರವೀಂದ್ರ ಕಾರ್ಯಾಚರಣೆ ನಡೆಸಿ ಹಣ ವಶಪಡಿಸಿಕೊಂಡಿದ್ದಾರೆ.