ಕರ್ನಾಟಕ

karnataka

ETV Bharat / city

ಶಾಸಕ ರೇಣುಕಾಚಾರ್ಯ ಯಾವಾಗ ಎಲ್ಲೆಲ್ಲಿ ಮಲಗಿದ್ರು ಗೊತ್ತಿಲ್ಲ; ಮಾಜಿ ಶಾಸಕ ಶಾಂತನಗೌಡರ - ರೇಣುಕಾಚಾರ್ಯ ಶಾಂತನಗೌಡ ಹೇಳಿಕೆ

ಶಾಸಕ ರೇಣುಕಚಾರ್ಯ ಧನ್ವಂತರಿ ಹಾಗು ಮೃತ್ಯುಂಜಯ ಹೋಮ ಹಮ್ಮಿಕೊಂಡಿದ್ದ ಹಿನ್ನೆಲೆ ಹೊನ್ನಾಳಿ ಹಾಲಿ ಶಾಸಕ ಮತ್ತು ಮಾಜಿ ಶಾಸಕರ ನಡುವಿನ ವಾಗ್ವಾದ ಮುಂದುವರೆದಿದೆ. ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡುತ್ತಿರುವ ನಾಯಕರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ.

i-know-where-with-whom-renukacharya-slept
ಮಾಜಿ‌ ಶಾಸಕ ಶಾಂತನಗೌಡ

By

Published : Jun 14, 2021, 5:14 PM IST

ದಾವಣಗೆರೆ: ಹೊನ್ನಾಳಿಯ ಹಾಲಿ ಶಾಸಕ ಎಂಪಿ ರೇಣುಕಾಚಾರ್ಯ ಹಾಗೂ ಮಾಜಿ ಶಾಸಕ ಶಾಂತನಗೌಡರ ನಡುವೆ ಮತ್ತೆ ವಾಕ್ಸಮರ ಮುಂದುವರೆದಿದೆ. ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಇದರ ನಡುವೆ ಶಾಂತನಗೌಡರು, ರೇಣುಕಾಚಾರ್ಯ ಯಾರ್ ಜೊತೆ ಎಲ್ಲೆಲ್ಲಿ ಯಾವಾಗ್ಯಾವ ಮಲ್ಗಿದ್ರು ಅಂತ ಗೊತ್ತಿಲ್ಲ, ಆದ್ರೆ ಬಾಗಿಲು ಮಾತ್ರ ತೆರೆದಿತ್ತು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹಾಲಿ ವರ್ಸಸ್ ಮಾಜಿ ವಾಕ್ಸಮರ

ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್​ನಲ್ಲಿ ಲೋಕಕಲ್ಯಾಣಕ್ಕಾಗಿ ಶಾಸಕ ರೇಣುಕಚಾರ್ಯ ಧನ್ವಂತರಿ ಹಾಗೂ ಮೃತ್ಯುಂಜಯ ಹೋಮ ಹಮ್ಮಿಕೊಂಡಿದ್ದ ಹಿನ್ನೆಲೆ ದೂರು ದಾಖಲಿಸುವಂತೆ ಅಧಿಕಾರಿಗಳಿಗೆ ಶಾಂತನಗೌಡರು ಒತ್ತಡ ಹಾಕಿದ್ದರು. ಇದಕ್ಕೆ ಶಾಸಕ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿ ಮಾಜಿ‌ ಶಾಸಕರಿಗೆ ತಾಖತ್ ಇದ್ರೆ ಕೋವಿಡ್ ಕೇರ್ ಸೆಂಟರ್​ನಲ್ಲಿ ಬಂದು ಮಲಗಿ ಎಂದು ಚಾಲೆಂಜ್ ಮಾಡಿದ್ದರು.‌

ಇದರಿಂದ ಕೆರಳಿದ ಮಾಜಿ ಶಾಸಕ ಶಾಂತನ‌ಗೌಡರು, ನನಗೆ ಅವ್ರ ಸ್ಟೈಲ್​ನಲ್ಲಿ ಚಾಲೆಂಜ್ ಮಾಡ್ತಾರೆ, ಅವ್ರು ಯಾರ್ ಜೊತೆ ಎಲ್ಲೆಲ್ಲಿ ಯಾವಾಗ್ಯಾವ ಮಲ್ಗಿದ್ರು ಅಂತ ಗೊತ್ತಿಲ್ಲ, ಆದ್ರೆ ಅವರ ಬಾಗಿಲು ಮಾತ್ರ ತೆರೆದೇ ಇದೆ ಎಂದು ವ್ಯಂಗ್ಯವಾಡಿದ್ದಾರೆ.

ABOUT THE AUTHOR

...view details