ಕರ್ನಾಟಕ

karnataka

ETV Bharat / city

ಹನಿಟ್ರ್ಯಾಪ್ ಮಾಡಿ ₹12 ಲಕ್ಷಕ್ಕೆ ಬೇಡಿಕೆ ಇಟ್ಟ ಗ್ಯಾಂಗ್​ ಅರೆಸ್ಟ್​ - ಈಟಿವಿ ಭಾರತ್​ ಕನ್ನಡ

ವ್ಯಕ್ತಿಯೋರ್ವನನ್ನು ಹನಿಟ್ರ್ಯಾಪ್​ ಮಾಡಿ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್​​ವೊಂದನ್ನ ಪೊಲೀಸರು ಬಂಧಿಸಿದ್ದಾರೆ.

kn_dvg_02_17_blackmail_pkg_7204336
ಹನಿಟ್ರ್ಯಾಪ್ ಪ್ರಕರಣ

By

Published : Aug 17, 2022, 10:46 PM IST

ದಾವಣಗೆರೆ: ಜಿಲ್ಲೆಯಲ್ಲಿ ರಕ್ಷಣ ವೇದಿಕೆ ಹೆಸರಿನಲ್ಲಿ ಹನಿಟ್ರ್ಯಾಪ್​ ಮಾಡಿ ಬ್ಲಾಕ್​ಮೇಲ್​ ಮಾಡಿದ್ದ ಖತರ್ನಾಕ್​ ಗ್ಯಾಂಗ್​ನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

ಶಿವರಾಜ್​, ಸುರೇಶ್​, ಪವಿತ್ರ, ರಮ್ಯಾ ಬಂಧಿತ ಆರೋಪಿಗಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರು ಆರೋಪಿಗಳನ್ನು ಬಂಧಿಸುವುದಾಗಿ ಪೋಲಿಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಇತ್ತೀಚೆಗೆ ನಗರದಲ್ಲಿ ವ್ಯಕ್ತಿಯೋರ್ವನನ್ನ ಹನಿಟ್ರ್ಯಾಪ್​ ಮಾಡಲಾಗಿತ್ತು. ವ್ಯಕ್ತಿಯ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿ ಕುಟುಂಬದವರಿಗೆ ವಿಡಿಯೋ ಹರಿಬಿಡುತ್ತೇವೆಂದು ಬೆದರಿಕೆ ಹಾಕಿ 12 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿತ್ತು.

ಸಿಬಿ ರಿಷ್ಯಂತ್, ಪೋಲಿಸ್ ವರಿಷ್ಠಾಧಿಕಾರಿ

ಇದಕ್ಕೆ ಹೆದರಿದ ವ್ಯಕ್ತಿ ಆರೋಪಿತ ಗ್ಯಾಂಗ್​ಗೆ 1.2 ಲಕ್ಷ ರೂಪಾಯಿ ನೀಡಿದ್ದಾನೆ. ಉಳಿದ ಹಣವನ್ನು ಚೆಕ್​ ಮುಖಾಂತರ ನೀಡುವುದಾಗಿ ಹೇಳಿದ್ದಾನೆ. ಇದರ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿರುವುದಾಗಿ ರಿಷ್ಯಂತ್​ ತಿಳಿಸಿದ್ದಾರೆ.

ಇದನ್ನೂ ಓದಿ: ಕೊಟ್ಟ ಹಣ ಮರಳಿ ಕೇಳಿದ್ದಕ್ಕೆ ಮಹಿಳೆಗೆ ಬೆಂಕಿ ಹಚ್ಚಿ ಕೊಂದ ದುರುಳರು

ABOUT THE AUTHOR

...view details