ದಾವಣಗೆರೆ: ಹಿಜಾಬ್- ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನ ಮಧ್ಯಂತರ ಆದೇಶ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸರ್ಕಾರದ ಆದೇಶವಿದ್ದರೂ ಇನ್ನೂ ರಾಜ್ಯದ ಕೆಲವೆಡೆ ಗಲಾಟೆ ಮುಂದುವರಿದಿದೆ. ಈ ಕುರಿತಂತೆ ಪ್ರಚೋದನಾಕಾರಿ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಜಿಲ್ಲೆಯ ಹರಿಹರ ನಗರದ ಜೆ.ಸಿ.ರಸ್ತೆಯಲ್ಲಿರುವ ಡಿಗ್ರಿ ಕಾಲೇಜಿನಲ್ಲಿ ಎರಡು ಕೋಮುಗಳ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದ್ದು ಈ ಸಂದರ್ಭದಲ್ಲಿ ಒಂದು ಕೋಮಿನ ಪಿಯು ವಿದ್ಯಾರ್ಥಿ ಮೇಲೆ ಮತ್ತೊಂದು ಕೋಮಿನ ವಿದ್ಯಾರ್ಥಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕೋಮು ಸಾಮರಸ್ಯ ಕದಡಲು ಕೆಲವರು ಯತ್ನಿಸಿದ್ದಾರೆ.