ದಾವಣಗೆರೆ/ಚಿಕ್ಕಬಳ್ಳಾಪುರ: ದಾವಣಗೆರೆ ಜಿಲ್ಲೆಯಲ್ಲಿ ವರುಣಾರ್ಭಟ (Heavy Rain) ಜೋರಾಗಿದ್ದು, ಮಳೆಗೆ ಇಬ್ಬರು ಬಲಿಯಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲೂ ಮಳೆಗೆ ಮನೆ ಕುಸಿದು ಬಿದ್ದಿದ್ದು, 6 ಕುರಿ 4 ಮೇಕೆಗಳು ಸಾವನ್ನಪ್ಪಿವೆ.
ಹಳ್ಳದಾಟಲು ಹೋದ ರೈತ ನೀರು ಪಾಲು:ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಹರಿಯುತ್ತಿರುವ ಹಳ್ಳದಾಟಲು ಹೋದ ರೈತ ನೀರು ಪಾಲಾಗಿದ್ದಾರೆ. ಮೃತ 60 ವರ್ಷದ ರೈತ ಚನ್ನಗಿರಿ ತಾಲೂಕಿನ ಗುರುರಾಜಪುರದ ನಿವಾಸಿ ಎಂದು ತಿಳಿದುಬಂದಿದೆ. ಸ್ಥಳೀಯ ಯುವಕರು ಶವ ಹೊರತೆಗೆದಿದ್ದು, ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದಾವಣಗೆರೆಯಲ್ಲಿ ಮಳೆಗೆ ಇಬ್ಬರು ಬಲಿ ಮಳೆಗೆ ಹರಿಹರದಲ್ಲಿ ಮತ್ತೊಂದು ಬಲಿ:ಹರಿಹರ ತಾಲೂಕಿನ ಗೋವಿನಹಾಳ್ ಗ್ರಾಮದಲ್ಲಿ ಧಾರಾಕಾರ ಮಳೆಗೆ ಕುರಿ ಕೊಟ್ಟಿಗೆ ಬಿದ್ದು ಬಸವರಾಜಪ್ಪ ಎಂಬುವರು ಸಾವನ್ನಪ್ಪಿದ್ದಾರೆ. ಅಲ್ಲದೇ 8 ಕುರಿಗಳು ಸಹ ಬಲಿಯಾಗಿದ್ದು, ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಕುರಿ-ಮೇಕೆಗಳು ಸಾವು ಬಾಗೇಪಲ್ಲಿಯಲ್ಲಿ ಕುರಿ-ಮೇಕೆಗಳು ಬಲಿ:ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಯರ್ರಪೆಂಟ್ಲ ಗ್ರಾಮದಲ್ಲಿ ಭೀಕರ ಮಳೆಗೆ ಮನೆ ಕುಸಿದು ಬಿದ್ದು 6 ಕುರಿಗಳು, 4 ಮೇಕೆಗಳು ಅಸುನೀಗಿವೆ. ಜೀವನಾಧಾರಕ್ಕಾಗಿ ಯರ್ರಪೆಂಟ್ಲ ಗ್ರಾಮದ ರೈತ ಚಂದ್ರಪ್ಪ ಎಂಬುವರು ಕುರಿ-ಮೇಕೆಗಳನ್ನು ಸಾಕುತ್ತಿದ್ದರು. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಕುಸಿದು ಬಿದ್ದು ಕುರಿ, ಮೇಕೆಗಳು ಸಾವನ್ನಪ್ಪಿವೆ. ಪಾತಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಓದಿ:ಕೋಟೆನಾಡಿನಲ್ಲಿ ಧಾರಾಕಾರ ಮಳೆ.. ಭರ್ತಿಯಾದ ಕೆರೆ-ಕಟ್ಟೆ, ಚೆಕ್ ಡ್ಯಾಂಗಳು..