ದಾವಣಗೆರೆ: ಒಮಿಕ್ರಾನ್ ಸೋಂಕಿನ ಆತಂಕ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾಡಳಿತ ಮನೆ ಮನೆ ಲಸಿಕಾ ಕಾರ್ಯಕ್ರಮ ಹಾಗು ಸ್ಯ್ವಾಬ್ ಟೆಸ್ಟ್ ಮಾಡಲು ಮುಂದಾಗಿದೆ.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೇತೃತ್ವದಲ್ಲಿ ಇಡೀ ಜಿಲ್ಲಾಡಳಿತ ನರ್ಸಿಂಗ್, ಮೆಡಿಕಲ್ ಕಾಲೇಜುಗಳ ಮೇಲೆ ನಿಗಾ ಇರಿಸಿದೆ. ಇದಲ್ಲದೇ ಸರ್ಕಾರದ ಆದೇಶದ ಮೇರೆಗೆ ದಾವಣಗೆರೆಯ ಎಲ್ಲಾ ಮೆಡಿಕಲ್, ನರ್ಸಿಂಗ್ ಹಾಗು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸ್ಯ್ವಾಬ್ ಟೆಸ್ಟ್ ಮಾಡಲು ಆರಂಭಿಸಿದೆ.