ದಾವಣಗೆರೆ:ಕಿಂಗ್ ಪಿನ್ ಬಗ್ಗೆ ಮಾಹಿತಿ ಕೊಟ್ಟರೆ ಸಚಿವ ಸ್ಥಾನದಿಂದ ನೀವು ಗಂಟು ಮೂಟೆ ಕಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗೃಹ ಸಚಿವರಿಗೆ ಟಾಂಗ್ ಕೊಟ್ಟಿದ್ದಾರೆ. ತಪ್ಪು ಮುಚ್ಚಿಕೊಳ್ಳಲು ಸಚಿವ ಆರಗ ಜ್ಞಾನೇಂದ್ರ ದಾಖಲೆ ಬಿಡುಗಡೆ ಮಾಡಿ, ಸರ್ಕಾರ ಹೋದರೆ ಹೋಗಲಿ ಎಂಬ ಸವಾಲ್ ಹಾಕಿದ್ದಾರೆ ಎಂದು ಹೆಚ್ಡಿಕೆ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಮಾತನಾಡಿದ ಅವರು, ಪಿಎಸ್ಐ ಅಕ್ರಮ ನೇಮಕಾತಿ ಕಿಂಗ್ ಪಿನ್ ಬಗ್ಗೆ ನಾನು ದಾಖಲೆ ಕೊಡಲು ತಯಾರಿದ್ದೇನೆ. ನಿಮ್ಮ ಸ್ಥಾನ ಮೊದಲು ಬಿಗಿ ಮಾಡಿಕೊಳ್ಳಿ. ಬಿಜೆಪಿ ಸರ್ಕಾರ ಹೋಗುವುದರ ತೀರ್ಮಾನ ತೆಗೆದುಕೊಳ್ಳುವ ಶಕ್ತಿ ಇವರಿಗಿಲ್ಲ. ಬಿಜೆಪಿ ಪಕ್ಷವನ್ನು ನೋಡಿದ್ದೇನೆ ಕೊನೆ ಸಭೆ ಆಗುವರೆಗೂ ಅಧಿಕಾರದಿಂದ ಹೋಗಲ್ಲ ಎಂದರು.