ಕರ್ನಾಟಕ

karnataka

ETV Bharat / city

ದಾವಣಗೆರೆಯಲ್ಲಿ ನಿವೃತ್ತ ಯೋಧರಿಗೆ ಅದ್ದೂರಿ ಸ್ವಾಗತ.. ಸಖತ್ ಸ್ಟೆಪ್ ಹಾಕಿದ ಮೇಯರ್ ವೀರೇಶ್.. - ದಾವಣಗೆರೆ ಮೇಯರ್ ವೀರೇಶ್ ಡ್ಯಾನ್ಸ್

ನಗರದ ಆರ್. ಹೆಚ್ ವೃತ್ತದಲ್ಲಿ ತೆರೆದ ವಾಹನದಲ್ಲಿ ನಿವೃತ್ತ ಯೋಧರನ್ನು ಮೆರವಣಿಗೆ ಮಾಡಿಸುವ ವೇಳೆ ಮಹಾನಗರ ಪಾಲಿಕೆಯ ಮೇಯರ್ ಎಸ್.ಟಿ ವೀರೇಶ್ ತಮಟೆ ಸೌಂಡಿಗೆ ಸಖತ್ ಸ್ಟೆಪ್​​ ಹಾಕಿದರು.‌ ವೀರೇಶ್ ಅವರೊಂದಿಗೆ ಯೋಧರ ಕುಟುಂಬಸ್ಥರು ಕೂಡ ಹೆಜ್ಜೆ ಹಾಕಿದರು..

grand welcome to Retired soldiers in davanagere
ದಾವಣಗೆರೆಯಲ್ಲಿ ನಿವೃತ್ತ ಯೋಧರಿಗೆ ಅದ್ಧೂರಿ ಸ್ವಾಗತ

By

Published : Jan 5, 2022, 1:53 PM IST

Updated : Jan 5, 2022, 2:23 PM IST

ದಾವಣಗೆರೆ: ದೇಶ ಸೇವೆ ಸಲ್ಲಿಸಿ ನಿವೃತ್ತರಾದ ಅರಸೀಕೆರೆಯ ನಾಗರಾಜ್ ಶೆಟ್ಟಿ ಹಾಗೂ ದಾವಣಗೆರೆಯ ರಾಘವೇಂದ್ರ ಎಂಬಿಬ್ಬರು ಯೋಧರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಸಖತ್ ಸ್ಟೆಪ್ ಹಾಕುವ ಮೂಲಕ ನಿವೃತ್ತ ಯೋಧರನ್ನು ಮೇಯರ್ ಎಸ್.ಟಿ ವೀರೇಶ್ ಬರಮಾಡಿಕೊಂಡರು.

ದಾವಣಗೆರೆಯ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ನಿವೃತ್ತ ಯೋಧರನ್ನು ತೆರೆದ ವಾಹನದಲ್ಲಿ ದಾವಣಗೆರೆಯಾದ್ಯಂತ ಮೆರವಣಿಗೆ ಮಾಡಿಸಲಾಯಿತು. ಆ ಮೂಲಕ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು.

ದಾವಣಗೆರೆಯಲ್ಲಿ ನಿವೃತ್ತ ಯೋಧರಿಗೆ ಅದ್ಧೂರಿ ಸ್ವಾಗತ

ನಗರದ ಆರ್. ಹೆಚ್ ವೃತ್ತದಲ್ಲಿ ತೆರೆದ ವಾಹನದಲ್ಲಿ ನಿವೃತ್ತ ಯೋಧರನ್ನು ಮೆರವಣಿಗೆ ಮಾಡಿಸುವ ವೇಳೆ ಮಹಾನಗರ ಪಾಲಿಕೆಯ ಮೇಯರ್ ಎಸ್.ಟಿ ವೀರೇಶ್ ತಮಟೆ ಸೌಂಡಿಗೆ ಸಖತ್ ಸ್ಟೆಪ್​​ ಹಾಕಿದರು.‌ ವೀರೇಶ್ ಅವರೊಂದಿಗೆ ಯೋಧರ ಕುಟುಂಬಸ್ಥರು ಕೂಡ ಹೆಜ್ಜೆ ಹಾಕಿದರು.

ಇದನ್ನೂ ಓದಿ:ಪ್ಯಾಕೇಜ್ ಘೋಷಿಸಿ ಲಾಕ್‌ಡೌನ್ ಆದ್ರೂ ಮಾಡಿ ಏನಾದ್ರೂ ಮಾಡಿ: ವಿಪಕ್ಷ ನಾಯಕ ಖರ್ಗೆ ಕಿಡಿ

ನಿವೃತ್ತ ಯೋಧರಾದ ರಾಘವೇಂದ್ರ 21 ವರ್ಷಗಳ ಕಾಲ ಹಾಗೂ ನಾಗರಾಜ್ ಶೆಟ್ಟಿ 27 ವರ್ಷಗಳ ಕಾಲ ಬಿಎಸ್ಎಫ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂದು ತವರಿಗೆ ಬಂದ ಯೋಧರನ್ನು ಮೇಯರ್ ವೀರೇಶ್ ಸೇರಿದಂತೆ ಸ್ಥಳೀಯರು ಆತ್ಮೀಯವಾಗಿ ಬರಮಾಡಿಕೊಂಡರು. ಪೊಲೀಸರು ಕೂಡ ಭಾಗಿಯಾಗಿದ್ದರು.

Last Updated : Jan 5, 2022, 2:23 PM IST

ABOUT THE AUTHOR

...view details