ಕರ್ನಾಟಕ

karnataka

ETV Bharat / city

ಮೈಕ್ ಹಿಡಿದು ಸರ್ಕಾರಿ ಯೋಜನೆಗಳ ಕುರಿತು ಗ್ರಾ.ಪಂ ಸದಸ್ಯನಿಂದ ಜನಜಾಗೃತಿ

ಚುನಾವಣೆಯಲ್ಲಿ ಗೆದ್ದ ಬಳಿಕ ಮತದಾರರನ್ನು ಮರೆತುಬಿಡುವ ಜನಪ್ರತಿನಿಧಿಗಳೇ ಹೆಚ್ಚು. ಅಂಥದ್ರಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅರೇಹಳ್ಳಿ ಕ್ಷೇತ್ರದ ಗ್ರಾ.ಪಂ ಸದಸ್ಯ ಚೇತನ್, ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಎಂದು ಮೈಕ್ ಹಿಡಿದು ಜನಜಾಗೃತಿ ಮೂಡಿಸುತ್ತಿದ್ದಾರೆ.

Grama panchayat member
ಸರ್ಕಾರಿ ಯೋಜನೆಗಳ ಕುರಿತು ಜಾಗೃತಿ ಮೂಡಿಸುತ್ತಿರುವ ಗ್ರಾಪಂ ಸದಸ್ಯ

By

Published : Oct 29, 2021, 6:50 AM IST

Updated : Oct 29, 2021, 8:41 AM IST

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಅಧಿಕಾರ ಸಿಕ್ಕರೆ ಸಾಕು ಅನೇಕರು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು ಹಣ ಗಳಿಸಲು ಮುಂದಾಗುತ್ತಾರೆ. ಆದ್ರೆ ಇಲ್ಲೊಬ್ಬ ಗ್ರಾ.ಪಂ‌ ಸದಸ್ಯ ಮಾತ್ರ ಜನರ ಮನೆ-ಮನೆಗೆ ತೆರಳಿ ಸರ್ಕಾರಿ ಯೋಜನೆಗಳನ್ನು ಬಳಕೆ ಮಾಡಿಕೊಳ್ಳಿ ಎಂದು ಅರಿವು ಮೂಡಿಸುತ್ತಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅರೇಹಳ್ಳಿ ಕ್ಷೇತ್ರದ ಗ್ರಾ.ಪಂ ಸದಸ್ಯ ಚೇತನ್, ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಎಂದು ಇಡೀ ಗ್ರಾಮ ಅಲೆಯುತ್ತಿದ್ದಾರೆ.

ಉದ್ಯೋಗ ಖಾತ್ರಿ, ಎರೆ ಹುಳು ತೊಟ್ಟಿ, ದನದ ಕೊಟ್ಟಿಗೆ, ಶೌಚಾಲಯಗಳು ಹಾಗೂ ನಿವೇಶನಕ್ಕೆ ಅರ್ಜಿ ಸೇರಿದಂತೆ ಪ್ರತಿಯೊಂದು ಯೋಜನೆಗಳ ಕುರಿತು ಇವರು ಜನರಿಗೆ ಮನವರಿಕೆ ಮಾಡುತ್ತಿದ್ದಾರೆ. ಇದರ ಜೊತೆಗೆ ಉದ್ಯೋಗ ಖಾತ್ರಿ ಯೋಜನೆ ಮಾಹಿತಿಯನ್ನು ಫಲಾನುಭವಿಗಳಿಗೆ ತಿಳಿಸಿ, ಸಾಕಷ್ಟು ಜನರನ್ನು ಕೆಲಸಕ್ಕೆ ಕರೆತಂದಿದ್ದಾರೆ. ಇಂದು ಗ್ರಾಮ ಸಭೆ ಕೂಡ ಕರೆಯಲಾಗಿದ್ದು, ಸಭೆಯಲ್ಲಿ ಜನರು ಪಾಲ್ಗೊಂಡು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವಂತೆ ತಿಳಿಸಿದ್ದಾರೆ.

ಸರ್ಕಾರಿ ಯೋಜನೆಗಳ ಕುರಿತು ಜಾಗೃತಿ ಮೂಡಿಸುತ್ತಿರುವ ಗ್ರಾ.ಪಂ ಸದಸ್ಯ

ಚೇತನ್ ಪ್ರಜಾಕೀಯ ಪಕ್ಷದ ಸಿದ್ಧಾಂತಗಳನ್ನು ಪಾಲಿಸುತ್ತಾ ತಮ್ಮ ಮತ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.

Last Updated : Oct 29, 2021, 8:41 AM IST

ABOUT THE AUTHOR

...view details