ದಾವಣಗೆರೆ: ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುವ ಜನರಿಗೆ ಉಚಿತವಾಗಿ ಸಸ್ಯಗಳನ್ನು ನೀಡುವ ಮೂಲಕ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾ.ಪಂ ಸದಸ್ಯ ವಿಭಿನ್ನವಾಗಿ ಪ್ರೋತ್ಸಾಹಿಸುತ್ತಿದ್ದಾರೆ.
ವ್ಯಾಕ್ಸಿನ್ ಪಡೆದರೆ ಸಸ್ಯಗಳು ಫ್ರೀ: ಲಸಿಕೆ ಅಭಿಯಾನದ ಯಶಸ್ಸಿಗೆ ಗ್ರಾ.ಪಂ ಸದಸ್ಯನ ಪ್ರಯತ್ನ
ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ಗ್ರಾಮದ 2ನೇ ವಾರ್ಡ್ ಸದಸ್ಯ ಆಸೀಫ್ ಹಾಗು ಸ್ನೇಹಿತರು ಈ ವಿನೂತನ ಕಾರ್ಯಕ್ರಮ ಆಯೋಜಿಸಿದ್ದಾರೆ.
ಸಂತೆಬೆನ್ನೂರು ಆಸೀಫ್
ಸಂತೆಬೆನ್ನೂರು ಗ್ರಾಮದ 2ನೇ ವಾರ್ಡ್ ಸದಸ್ಯ ಆಸೀಫ್ ತನ್ನ ಸ್ನೇಹಿತರಾದ ಉಲ್ಲಾಸ್, ರುದ್ರೇಶ್ ಈವರೆಗೆ 500ಕ್ಕೂ ಹೆಚ್ಚು ಜನರಿಗೆ ಗಿಡಗಳನ್ನು ನೀಡಿದ್ದಾರೆ. 'ಲಸಿಕೆ ಹಾಕಿಸಿಕೊಳ್ಳಿ, ಗಿಡಗಳನ್ನು ಉಚಿತವಾಗಿ ಪಡೆಯಿರಿ' ಎನ್ನುವ ಮೂಲಕ ಲಸಿಕೆ ಅಭಿಯಾನ ಯಶಸ್ವಿಗೊಳಿಸಲು ಮುಂದಾಗಿದ್ದಾರೆ.
ಹೊಂಗೆ, ಹುಣಸೆ, ಬೇವು, ಹಲಸು ಸೇರಿದಂತೆ ಹಲವು ಸಸ್ಯಗಳನ್ನು ವಿತರಣೆ ಮಾಡುತ್ತಿದ್ದು, ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ, ಲಸಿಕೆ ಪಡೆಯಲು ಹಿಂದೇಟು ಹಾಕುವವರನ್ನು ಮನವೊಲಿಸಿ ಲಸಿಕೆ ಹಾಕಿಸುವ ಕಾರ್ಯವನ್ನೂ ಸದ್ದಿಲ್ಲದೆ ಮಾಡುತ್ತಿದ್ದಾರೆ.