ಕರ್ನಾಟಕ

karnataka

ETV Bharat / city

ಮೇಕೆದಾಟು ಯೋಜನೆಯಲ್ಲಿ ಯಾವುದೇ ರಾಜಿ ಇಲ್ಲ: ಗೋವಿಂದ ಕಾರಜೋಳ - mekedatu yojane

ನಮ್ಮ ರಾಜ್ಯದ ನೀರು ಬಳಕೆ ಮಾಡಲು ಬೇರೆ ರಾಜ್ಯದ ಅಪ್ಪಣೆ ಬೇಕಿಲ್ಲ. ಮೇಕೆದಾಟು ಯೋಜನೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.

govinda karajola
ಸಚಿವ ಗೋವಿಂದ ಕಾರಜೋಳ

By

Published : Aug 14, 2021, 2:09 PM IST

ದಾವಣಗೆರೆ: ಮೇಕೆದಾಟು ಯೋಜನೆಯಲ್ಲಿ ಯಾವುದೇ ರಾಜಿ ಇಲ್ಲ. ನಮ್ಮ ಪಾಲಿನ ನೆಲ, ಜಲ ಕಬಳಿಸಲು ಪ್ರಯತ್ನ ಮಾಡಿದ್ರೆ ಸರ್ಕಾರ ಬಗ್ಗಲ್ಲ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.

ಸಚಿವ ಗೋವಿಂದ ಕಾರಜೋಳ

ದಾವಣಗೆರೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಗೆ ಯಾವುದೇ ಅಡ್ಡಿ ಇಲ್ಲ. ನಮ್ಮ ರಾಜ್ಯದ ನೀರು ಬಳಕೆ ಮಾಡಲು ಬೇರೆ ರಾಜ್ಯದ ಅಪ್ಪಣೆ ಬೇಕಿಲ್ಲ. ಅರಣ್ಯ ಇಲಾಖೆ ಸೇರಿ ಇತರ ಇಲಾಖೆ ವತಿಯಿಂದ ಪ್ರಯತ್ನಿಸುತ್ತಿದ್ದೇವೆ. ಈ ವಿಷಯದಲ್ಲಿ ತಮಿಳುನಾಡು ಖ್ಯಾತೆ ತೆಗೆಯೋದು ಸರಿಯಲ್ಲ. ನಮ್ಮ ಪಾಲಿನ ನೀರನ್ನು ಕಬಳಿಸುವುದು ಸರಿಯಲ್ಲ. ಕಾನೂನಾತ್ಮಕವಾಗಿ ತಾಂತ್ರಿಕ ಪರಿಣಿತರಿಂದ ಈ ಪ್ರಕರಣ ಎದುರಿಸುತ್ತೇವೆ. ರಾಜಕಾರಣ ಮಾಡದೇ ಎಲ್ಲ ಪಕ್ಷದವರೂ ಒಗ್ಗಟ್ಟಾಗಿ ಇದನ್ನು ಎದುರಿಸುತ್ತೇವೆ ಎಂದು ತಿಳಿಸಿದರು.

ಭ್ರದ್ರಾ ಮೇಲ್ದಂಡೆ ಕಾಮಗಾರಿ:

ಭ್ರದ್ರಾ ಮೇಲ್ದಂಡೆ ಕಾಮಗಾರಿ ಚಾಲನೆಯಲ್ಲಿದ್ದು, ಅದನ್ನು ರಾಷ್ಟ್ರೀಯ ಕಾಮಗಾರಿ ಎಂದು ಘೋಷಣೆ ಮಾಡಲು ತಯಾರಿ ಕೂಡ ಮಾಡಿಕೊಳ್ಳಲಾಗಿದೆ. ಇನ್ನೊಂದು ಹೈ ಪವರ್ ಕಮಿಟಿ ಮೀಟಿಂಗ್ ಆಗಬೇಕಿದೆ. ಅದಾದ ನಂತರ ಕೇಂದ್ರ ಸಂಪುಟ ಒಳಪಡುತ್ತದೆ. ಆಗ‌ ನಮ್ಮ ಕೈ ಸೇರುತ್ತದೆ. ಅದೆಲ್ಲ ಬಹಳ ದಿನ ಕಾಯಬೇಕಿಲ್ಲ. ಸದ್ಯದಲ್ಲೇ ಇದೆ ಎಂದರು.

ಶಾಲೆಗಳು ಪ್ರಾರಂಭ:

ಇನ್ನು ಶಾಲೆಗಳು ಪ್ರಾರಂಭವಾಗುವ ಬಗ್ಗೆ ಮಾತನಾಡಿದ ಅವರು, ಶಾಲೆಗಳ ಪ್ರಾರಂಭದ ಬಗ್ಗೆ ನಮ್ಮ ತಜ್ಞರ ತಂಡ, ವೈದ್ಯರ ತಂಡ ನೋಡಿಕೊಳ್ಳುತ್ತಾರೆ. ಅವರೆಲ್ಲ ಸೇರಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ, ಅದರ ನಿರ್ಣಯ ಮಾಡುತ್ತೇವೆ ಎಂದರು. ಇನ್ನು ಶಾಸಕ ಯತ್ನಾಳ್ ಬಗ್ಗೆ ಪ್ರಶ್ನಿಸಿದರೆ ಯಾವುದೇ ಪ್ರತಿಕ್ರಿಯೆ ‌ನೀಡದೇ ಹೊರಟು ಹೋದರು.

ABOUT THE AUTHOR

...view details