ಕರ್ನಾಟಕ

karnataka

ETV Bharat / city

ಸಂಕಷ್ಟದಲ್ಲಿದ್ದ ಮಂಗಳಮುಖಿಯರಿಗೆ ದಾವಣಗೆರೆಯಲ್ಲಿ ಕೋಳಿ​ ಗಿಫ್ಟ್​ - ದಾವಣಗೆರೆ ಕೊರೊನಾ ಸುದ್ದಿ

ಲಾಕ್​ಡೌನ್​ನಿಂದಾಗಿ ಕಳೆದ ಎರಡು ತಿಂಗಳಿನಿಂದ ಕೆಲಸ ಇಲ್ಲದೇ ಊಟಕ್ಕೂ ಪರದಾಡುತ್ತಿದ್ದ ಮಂಗಳಮುಖಿಯರು ಚಿಕನ್ ತಿನ್ನಬೇಕೆಂಬ ಆಸೆ ವ್ಯಕ್ತಪಡಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಬಸವಂತಪ್ಪ ಎಂಬುವರು ಕೋಳಿಗಳನ್ನು ತಮ್ಮ ಸ್ವಂತ ಖರ್ಚಿನಲ್ಲೇ ಖರೀದಿಸಿ 50ಕ್ಕೂ ಹೆಚ್ಚು ಕುಟುಂಬಗಳಿಗೆ ನೀಡಿದ್ದಾರೆ.

free-hen-gave-to-transgender-and-poor-family-in-davanagere
ಚಿಕನ್​ ಗಿಫ್ಟ್​

By

Published : May 25, 2020, 5:00 PM IST

ದಾವಣಗೆರೆ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿರುವ ಮಂಗಳಮುಖಿಯರ ನೆರವಿಗೆ ಆನಗೋಡು ಜಿಲ್ಲಾ ಪಂಚಾಯತ್ ಸದಸ್ಯ ಬಸವಂತಪ್ಪ ಧಾವಿಸಿದ್ದಾರೆ. 50 ಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತವಾಗಿ ಕೋಳಿಗಳನ್ನು ವಿತರಿಸಿದ್ದಾರೆ.

ಮಾಲಶೆಟ್ಟಿಹಳ್ಳಿ, ಗೊಲ್ಲರಹಟ್ಟಿ, ಬಾಡಾ ಕ್ರಾಸ್ ಸೇರಿದಂತೆ ಇತರೆ ಗ್ರಾಮಗಳಲ್ಲಿ ಬಡತನದಿಂದ ಕಂಗೆಟ್ಟಿದ್ದ ಮುಸ್ಲಿಂರು, ಬಡವರು, ಅಲೆಮಾರಿ ಕುಟುಂಬದವರು ಹಾಗೂ ಮಂಗಳಮುಖಿಯರಿಗೆ ಕೋಳಿಗಳನ್ನು ನೀಡುವ ಜೊತೆಗೆ ಮಸಾಲೆ ಪದಾರ್ಥ ಖರೀದಿಗೆ 200 ರೂಪಾಯಿ ಮತ್ತು ಅಕ್ಕಿ ವಿತರಿಸಿದ್ದಾರೆ.

ಸಂಕಷ್ಟದಲ್ಲಿದ್ದ ಮಂಗಳಮುಖಿಯರಿಗೆ ಚಿಕನ್​ ಗಿಫ್ಟ್​
ಕಳೆದ ಎರಡು ತಿಂಗಳಿನಿಂದ ಕೆಲಸವಿಲ್ಲದೇ ಊಟಕ್ಕೂ ಪರದಾಡುತ್ತಿದ್ದ ಜನರಲ್ಲಿ ಕೋಳಿ ಖರೀದಿಸಲು ಹಣ ಇರಲಿಲ್ಲ.‌ ಹಾಗಾಗಿ ಚಿಕನ್ ತಿನ್ನಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಬಸವಂತಪ್ಪ ಕೋಳಿಗಳನ್ನು ತಮ್ಮ ಸ್ವಂತ ಖರ್ಚಿನಲ್ಲೇ ಖರೀದಿಸಿ ನೀಡಿದ್ದಾರೆ. ಈವರೆಗೆ ನಮ್ಮ ಕಷ್ಟಕ್ಕೆ ಯಾರೂ ಆಗಿರಲಿಲ್ಲ. ಕನಿಷ್ಠ ಆಹಾರದ ಕಿಟ್​ಗಳನ್ನು ನೀಡಿರಲಿಲ್ಲ.‌ ಮನೆಯಿಂದ ಹೊರ ಹೋಗುವಂತಿಲ್ಲ. ಒಂದೆಡೆ ಕೊರೊನಾ ಹೆಮ್ಮಾರಿ ನಮ್ಮ ಜೀವನ ಕಸಿದುಕೊಂಡಿದೆ. ಆದಾಯವೇ ಇಲ್ಲ, ನಮ್ಮ ಬಳಿ ಹಣವೂ ಇಲ್ಲ, ಬಸವಂತಪ್ಪ ಅವರು ಕೋಳಿಗಳನ್ನು ನೀಡುವ ಮೂಲಕ ನಮ್ಮ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಅವರಿಗೆ ಕೃತಜ್ಞತೆ ಅರ್ಪಿಸುವುದಾಗಿ ಮಂಗಳಮುಖಿಯರು ಹೇಳಿದ್ದಾರೆ.

ABOUT THE AUTHOR

...view details