ದಾವಣಗೆರೆ: ಬಿಕಿನಿ ಧರಿಸಿದ ಯುವತಿಯರನ್ನು ನೋಡಿದ್ರೆ ಉದ್ರೇಕ ಬರುತ್ತೆ ಅನ್ನೋ ಶಾಸಕ ರೇಣುಕಾಚಾರ್ಯ ಅವರ ಹೇಳಿಕೆಗೆ ಹೊನ್ನಾಳಿ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಶಾಂತನಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ಅವರ ತಟ್ಟೆಯಲ್ಲಿಯೇ ಹೆಗ್ಗಣ ಬಿದ್ದಿದೆ. ಆದ್ರೆ, ಅವರು ಮಾತ್ರ ಮತ್ತೊಬ್ಬರ ತಟ್ಟೆ ಬಗ್ಗೆ ಮಾತಾಡುತ್ತಾರೆ ಎಂದು ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಹೆಣ್ಣು ಮಕ್ಕಳು ತುಂಡು ಬಟ್ಟೆ ಧರಿಸುವ ಬಗ್ಗೆ ಶಾಸಕರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದ್ರೆ, ಅವರ ಕುಟುಂಬದವರೇ ತುಂಡು ಬಟ್ಟೆ ಧರಸಿದ ಬಗ್ಗೆ ಮೊಬೈಲ್ನಲ್ಲಿ ಫೋಟೋಗಳು ಹರಿದಾಡುತ್ತಿವೆ. ತಮ್ಮ ಕುಟುಂಬದವರ ಬಗ್ಗೆ ವಿಚಾರ ಮಾಡದೇ ಬೇರೆಯವರ ಬಗ್ಗೆ ಹೇಳುವುದು ಸರಿಯಲ್ಲ.