ದಾವಣಗೆರೆ:ಕಾಂಗ್ರೆಸ್‌ನವರು ಹೆಂಡ ಹಾಗೂ ಹಣದ ಬಲದಿಂದ ಚುನಾವಣೆ ಗೆಲ್ಲುವ ಕಾಲ ಒಂದಿತ್ತು, ಆ ಕಾಲ ಬದಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಕಾಂಗ್ರೆಸ್‌ನವರು ಹೆಂಡ, ಹಣದ ಬಲದಿಂದ ಚುನಾವಣೆ ಗೆಲ್ಲುತ್ತಿದ್ದ ಆ ಕಾಲ ಬದಲಾಗಿದೆ: ಮಾಜಿ ಸಿಎಂ ಬಿಎಸ್‌ವೈ B.S.Yediyurappa: ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ನಡೆದ ಪ್ರಚಾರ ಸಭೆಯ ವೇದಿಕೆಯಲ್ಲಿ ಮಾತನಾಡಿದ ಅವರು, ಇನ್ನೂ 25 ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ವಲ್ಪ ಮಟ್ಟಿಗೆ ಉಸಿರಾಡುತ್ತಿದೆ. ಈ ಉಸಿರು ನಿಲ್ಲಸಬೇಕೆಂದರೆ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಕು. ಜಾತಿಯ ವಿಷ ಬೀಜ ಬಿತ್ತಿದ್ದು ಕಾಂಗ್ರೆಸ್ ಎಂದು ಬಿಎಸ್‌ವೈ ವಾಗ್ದಾಳಿ ನಡೆಸಿದ್ದಾರೆ.
ಹೆಣ್ಣುಮಕ್ಕಳು ಕಣ್ಣೀರು ಹಾಕುವ ಕಾಲ ಒಂದಿತ್ತು. ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಆ ಕಣ್ಣೀರು ಒರೆಸಲು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತರಲಾಯಿತು. 20 ಲಕ್ಷ ಹೆಣ್ಣು ಮಕ್ಕಳು ಭಾಗ್ಯಲಕ್ಷ್ಮಿ ಯೋಜನೆ ಪ್ರಯೋಜನ ಪಡೆದಿದ್ದಾರೆ ಎಂದರು.
'ಗಾಂಧಿಯವರು ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದಿದ್ದರು':
ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡಿ ಎಂದು ಆ ಪಕ್ಷದ ನಾಯಕರಿಗೆ ಅಂದು ಹೇಳಿದ್ರು. ಕಾಂಗ್ರೆಸ್ ನಾಯಕರು ಅಧಿಕಾರ ದುರಪಯೋಗ ಮಾಡಿಕೊಳ್ಳುವ ಭಯ ಇತ್ತು ಎಂದು ಗಾಂಧಿ ಹೇಳಿದ್ರು. ಆದರೆ ಅವರು ಕಾಂಗ್ರೆಸ್ ವಿಸರ್ಜನೆ ಮಾಡಲಿಲ್ಲ. ಬದಲಿಗೆ ರಾಜ್ಯದ ಜನತೆ ಇದೀಗ ಕಾಂಗ್ರೆಸ್ ಅನ್ನು ಉಸಿರಾಡದಂತೆ ಮಾಡಿದ್ದಾರೆ ಎಂದು ಬಿಎಸ್‌ವೈ ಟೀಕಿಸಿದರು.
ಕಾಂಗ್ರೆಸ್‌ನವರು ಹೆಂಡ, ಹಣದ ಬಲದಿಂದ ಚುನಾವಣೆ ಗೆಲ್ಲುತ್ತಿದ್ದ ಆ ಕಾಲ ಬದಲಾಗಿದೆ: ಮಾಜಿ ಸಿಎಂ ಬಿಎಸ್‌ವೈ 'ಲಖನ್ ಜಾರಕಿಹೊಳಿ ಬಗ್ಗೆ ಸಿಎಂ ಬಳಿ ಮಾತನಾಡಿದ್ದೇನೆ'
ಲಖನ್ ಜಾರಕಿಹೊಳಿ ಪಕ್ಷೇತರರಾಗಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ನಾನು ಮುಖ್ಯಮಂತ್ರಿಗೆ ಮಾತನಾಡಿ ಎಂದು ಹೇಳಿದ್ದೇನೆ. ನಾನು ಕೂಡ ಅವರ ಹತ್ತಿರ ಮಾತನಾಡುತ್ತೇನೆ ಎಂದರು.
ಪ್ರಧಾನಿ ನಿರ್ಧಾರಕ್ಕೆ ಬಿಎಸ್‌ವೈ ಅಭಿನಂದನೆ:ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ವರೆಗೂ ಉಚಿತ ಪಡಿತರ ಮುಂದುವರೆಸಿದ್ದಾರೆ. ರಾಜ್ಯ, ದೇಶದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಇದ್ದ ಕಾಲದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ ಎಂದು ಹೇಳಿದರು.