ಕರ್ನಾಟಕ

karnataka

ETV Bharat / city

ಸೂರಿಲ್ಲದೆ ಊರೂರು ಅಲೆಯುವ ಕುರಿಗಾಹಿಗಳು.. ಕುರಿ ಮೇಯಿಸಲು ಹೋದ್ರೆ ನೂರೆಂಟು ಅಡ್ಡಿ - davanagere latest news

ಊರೂರು ಸುತ್ತಿಕೊಂಡು ಜೀವನ ಸಾಗಿಸುವ ಕುರಿಗಾಹಿಗಳಿಗೆ ನಿಶ್ಚಿತವಾದ ನೆಲೆ ಇಲ್ಲ. ಯಾರಿಗೂ ತೊಂದರೆ ಕೊಡದೆ ಕುರಿ ಮೇಯಿಸಿಕೊಂಡು ಜೀವನ ಸಾಗಿಸುತ್ತಿರುವ ನಮ್ಮನ್ನು ಬದುಕಲು ಬಿಡಿ ಎಂದು ಅರಣ್ಯ ಇಲಾಖೆಗೆ ಅವರು ಮನವಿ ಮಾಡಿದ್ದಾರೆ. ಹಾಗಾದ್ರೆ ಈ ಕುರಿಗಾಹಿಗಳ ಸಮಸ್ಯೆಗಳೇನು? ಎನ್ನುವ ಸ್ಟೋರಿ ಇಲ್ಲಿದೆ ನೋಡಿ...

Shepherds
ಸಂಚಾರಿ ಕುರಿಗಾಹಿ

By

Published : Aug 7, 2021, 12:14 PM IST

ದಾವಣಗೆರೆ: ನಗರದ ಹೊರವಲಯದ ಖಾಲಿ ಜಾಗವೊಂದರಲ್ಲಿ ಬೀಡು ಬಿಟ್ಟಿರುವ ಕುರಿಗಾಹಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಕುರಿ ಮೇಯಿಸುತ್ತಾ ಊರೂರು ಅಲೆದು ಜೀವನ ಸಾಗಿಸುವ ಇವರಿಗೆ ಅರಣ್ಯ ಇಲಾಖೆ ಸೇರಿದಂತೆ ಅನೇಕ ಜನರಿಂದ ತೊಂದರೆಯಾಗುತ್ತಿದೆಯಂತೆ. ನಮಗೆ ಸೂರಿಲ್ಲ, ಇರುವ ಟೆಂಟ್​ಗಳನ್ನು ಸಿಬ್ಬಂದಿ ಕಿತ್ತಾಕಿ ತೊಂದರೆ ನೀಡುತ್ತಿದ್ದಾರೆ. ಇತ್ತೀಚೆಗೆ ಹೊಸಪೇಟೆ, ಉಜ್ಜೈ‌ನಿ, ಹೊನ್ನಾಳಿ ಸೇರಿದಂತೆ ವಿವಿಧೆಡೆ ಗುಡ್ಡಗಳಲ್ಲಿ ಕುರಿ ಮೇಯಿಸಲು ಹೋದ ಕುರಿಗಾಹಿಗಳ ಮೇಲೆ ಹಲ್ಲೆ ಮಾಡಿ, ಕುರಿಗಳನ್ನು ಹೊತ್ತುಕೊಂಡು ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸುರಕ್ಷತೆ ನೀಡುವಂತೆ ಒತ್ತಾಯಿಸಿದ ಅಲೆಮಾರಿ ಕುರಿಗಾಹಿಗಳು

ಈ ಕುರಿತು ದಾವಣಗೆರೆಯ ಪಿಬಿ ರಸ್ತೆಯ ಪಕ್ಕದಲ್ಲಿ ಸೇರಿದ ಸಂಚಾರಿ ಕುರುಬರು, ಸಮಾಲೋಚನಾ ಸಭೆ ನಡೆಸಿದ್ದಾರೆ. ಅಲೆಮಾರಿ ಕುರಿಗಾಹಿಗಳಿಗೆ ಸುರಕ್ಷತೆ ಅಗತ್ಯವಿದ್ದು, ಪಶುವೈದ್ಯಕೀಯ ಸೌಲಭ್ಯ ಮತ್ತು ಅವರ ಮಕ್ಕಳಿಗೆ ಸಂಚಾರಿ ಶಾಲೆಯ ಅಗತ್ಯವಿದೆ. ದುರಂತ ಅಂದ್ರೆ, ಇಂತವರಿಗೆ ಬ್ಯಾಂಕ್‌ಗಳು ಸಹ ಸಾಲ ಸೌಲಭ್ಯ ನೀಡಲು ಹಿಂದೇಟು ಹಾಕುತ್ತವೆ. ಇವರಿಗೆ ಸೂಕ್ತ ರಕ್ಷಣೆ ಹಾಗೂ ಕನಿಷ್ಠ ಸೌಲಭ್ಯಗಳನ್ನು ಕೂಡಲೇ ಒದಗಿಸಬೇಕು. ಇಲ್ಲದಿದ್ರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕುರುಬ ಸಮಾಜದ ಮುಖಂಡರು ಎಚ್ಚರಿಕೆ‌ ರವಾನಿಸಿದ್ದಾರೆ.

ABOUT THE AUTHOR

...view details