ಹರಿಹರ:ರೈಲ್ವೇ ಇಲಾಖೆಯಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಫ್ಲೈಓವರ್ ಕಾಮಗಾರಿಯ ಕುರಿತು ಈಟಿವಿ ಭಾರತ್ ವರದಿಗೆ ಸ್ಪಂದಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇತುವೆ ಮೇಲೆ ಸಂಚರಿಸಲು ಅನುವು ಮಾಡಿಕೊಟ್ಟಿದ್ದಾರೆ.
ನಿಧಾನಗತಿಯ ಫ್ಲೈ ಓವರ್ ಕಾಮಗಾರಿಗೆ ಮುಕ್ತಿ: ಇದು ಈಟಿವಿ ಭಾರತ್ ಫಲಶ್ರುತಿ - ಹರಿಹರ-ದಾವಣಗೆರೆ ಅವಳಿ ನಗರ
ರೈಲ್ವೇ ಇಲಾಖೆಯಿಂದ ಆಮೆ ಗತಿಯಲ್ಲಿ ಸಾಗುತ್ತಿದ್ದ ಫ್ಲೈಓವರ್ ಕಾಮಗಾರಿಯ ಕುರಿತು ಈ ಟಿವಿ ಭಾರತ್ ವರದಿಗೆ ಸ್ಪಂದಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇತುವೆ ಮೇಲೆ ಸಂಚರಿಸಲು ಅನುವು ಮಾಡಿಕೊಟ್ಟಿದ್ದಾರೆ.
ಕೆಲವು ದಿನಗಳ ಹಿಂದೆ ಈ ಕಾಮಗಾರಿ ಕುರಿತು ವಿಶೇಷ ವರದಿಯನ್ನು ಈ ಟಿವಿ ಭಾರತ್ ಪ್ರಸಾರ ಮಾಡಿತ್ತು. ಈ ವರದಿಯನ್ನು ನೋಡಿದ ಜನರೂ ಸಹ ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದರು. ವರದಿಗೆ ಸ್ಪಂದಿಸಿದ ರೈಲ್ವೇ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೂಡಲೇ ಒಂದು ಬದಿಯಲ್ಲಿ ವಾಹನ ಸವಾರರು ಸಂಚರಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಅನೇಕ ವರ್ಷಗಳಿಂದ ಹರಿಹರ-ದಾವಣಗೆರೆ ಅವಳಿ ನಗರಗಳ ಮಧ್ಯದಲ್ಲಿ ಎರಡು ರೈಲ್ವೆ ಲೆವೆಲ್ ಕ್ರಾಸಿಂಗ್ನಲ್ಲಿ ದಿನಕ್ಕೆ 45ಕ್ಕೂ ಹೆಚ್ಚು ರೈಲುಗಳು ಸಂಚರಿಸುವಾಗ ಎರಡೂ ಗೇಟುಗಳನ್ನು ಕನಿಷ್ಠ 20 ನಿಮಿಷ ಬಂದ್ ಮಾಡಲಾಗುತ್ತಿತ್ತು. ಇದರಿಂದ ಈ ನಗರಗಳ ನಡುವಿನ ವಾಹನ, ಜನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿತ್ತು.
ಈ ಸಮಸ್ಯೆ ನಿವಾರಣೆಗೆ ಸ್ಥಳೀಯ ಜನಪ್ರತಿನಿಧಿಗಳ ಪರಿಶ್ರಮದಿಂದ ನಗರಕ್ಕೆ ಸಮೀಪದ ಅಮರಾವತಿ ಬಳಿಯ ಲೆವೆಲ್ ಕ್ರಾಸಿಂಗ್ಗೆ 8 ಕೋಟಿ ರೂ.ಗಳ ಫ್ಲೈಓವರ್ ಮಂಜೂರಾಗಿ ನಾಲ್ಕು ವರ್ಷಗಳ ಹಿಂದೆ ಇಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಒಂದೇ ವರ್ಷದಲ್ಲಿ ಪೂರ್ಣಗೊಳಿಸುವ ಕಾಮಗಾರಿ ನಾಲ್ಕು ವರ್ಷವಾದರೂ ಪೂರ್ಣಗೊಂಡಿಲ್ಲ. ರಾತ್ರಿ ಕತ್ತಲಲ್ಲಿ, ಮಳೆಗಾಲದಲ್ಲಿ ಕೆಸರಿನಲ್ಲಿ ಸಂಚರಿಸಬೇಕಾದ ಜನರಿಗೆ ಈ ಕಾಮಗಾರಿ ಮೂಗಿಗಿಂತ ಮೂಗುತಿ ಭಾರ ಎನ್ನುವಂತಾಗಿತ್ತು. ಈಗ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತ್ತಾಗಿದ್ದು ಜನರು ಹೊಸ ಸೇತುವೆ ಮೇಲೆ ಸಂತೋಷದಿಂದ ಸಂಚರಿಸುತ್ತಿದ್ದಾರೆ.
TAGGED:
ಹರಿಹರ-ದಾವಣಗೆರೆ ಅವಳಿ ನಗರ