ದಾವಣಗೆರೆ: ಜಮೀನು ವಿವಾದಕ್ಕೆ ಎರಡು ಗ್ರಾಮಗಳ ಜನರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕತ್ತಿ, ದೊಣ್ಣೆ, ಕುಡುಗೋಲುಗಳಿಂದ ಪರಸ್ಪರ ಸಿನಿಮೀಯ ರೀತಿ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕಂಚಿಕೊಪ್ಪ ಹಾಗೂ ಹೊನ್ನಾಳಿಯ ತುಗ್ಗಲಹಳ್ಳಿ ಗ್ರಾಮಸ್ಥರ ನಡುವೆ ಈ ಗಲಾಟೆ ನಡೆದಿದೆ. ಕಂಚಿಕೊಪ್ಪ ಗ್ರಾಮದ 30 ದಲಿತ ಕುಟುಂಬಗಳು ತುಗ್ಗಲಹಳ್ಳಿ ಗ್ರಾಮದ ಬಳಿ ಇರುವ ಸರ್ವೇ ನಂಬರ್ 29-30ರಲ್ಲಿನ 40 ಎಕರೆ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದು, ಸಾಗುವಳಿ ಚೀಟಿ, ಪಹಣಿ ಪತ್ರ ಕೂಡ ನೀಡಲಾಗಿದೆ. ಈ ಜಮೀನು ಖಾತೆ ಮಾಡಿಕೊಡುವಂತೆ ಕಂಚಿಕೊಪ್ಪ ಗ್ರಾಮದ ದಲಿತ ಕುಟುಂಬಗಳು ಕೋರ್ಟ್ ಮೊರೆ ಹೋಗಿದ್ದವು. ಅದ್ರೆ ಇದೇ ಸಂದರ್ಭದಲ್ಲಿ ತುಗ್ಗಲಹಳ್ಳಿ ಗ್ರಾಮದ ಕೆಲವರು, ದಲಿತರು ಉಳುಮೆ ಮಾರುತ್ತಿರುವ ಜಮೀನು ನಮಗೆ ಸೇರಿದ್ದು ಎಂದು ತಕರಾರು ತೆಗೆದಿದ್ದಾರೆ.