ಕರ್ನಾಟಕ

karnataka

ETV Bharat / city

ಕೊರೊನಾ ವೈರಸ್​​​ ಭೀತಿ: ರಾಜ್ಯದಲ್ಲಿ ಪಾತಾಳಕ್ಕಿಳಿದ ಕೋಳಿ ಮಾಂಸದ ದರ!

ಕೊರೊನಾ ಸೋಂಕಿನ ಭೀತಿಯಿಂದ ಕೋಳಿ ಮಾಂಸದ ದರದಲ್ಲಿ ಕುಸಿತ ಉಂಟಾಗಿದ್ದು, ಸಂಕಷ್ಟಕ್ಕೊಳಗಾಗಿರುವ ಸಾಕಾಣಿಕೆದಾರರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು ಎಂದು ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಮಲ್ಲಾಪುರ ದೇವರಾಜ್ ಆಗ್ರಹಿಸಿದ್ದಾರೆ.

KN_DVG_02_KOLI_RATE_DOWN_AVBB_KA10016
ಕೊರೊನಾ ಸೋಂಕಿನ ಭೀತಿ, ಕೆಜಿಗೆ 25 ರೂ ತಲುಪಿದ ಕೋಳಿ ಮಾಂಸ...!

By

Published : Feb 29, 2020, 4:53 PM IST

ದಾವಣಗೆರೆ: ಕೊರೊನಾ ಸೋಂಕಿನ ಭೀತಿಯಿಂದ ಕೋಳಿ ಮಾಂಸದ ದರದಲ್ಲಿ ಕುಸಿತ ಉಂಟಾಗಿದ್ದು, ಸಂಕಷ್ಟಕ್ಕೊಳಗಾಗಿರುವ ಸಾಕಾಣಿಕೆದಾರರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು ಎಂದು ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಮಲ್ಲಾಪುರ ದೇವರಾಜ್ ಆಗ್ರಹಿಸಿದ್ದಾರೆ.

ಕೊರೊನಾ ಸೋಂಕಿನ ಭೀತಿ: ಕೆಜಿಗೆ 25 ರೂ. ತಲುಪಿದ ಕೋಳಿ ಮಾಂಸ!

ಕೊರೊನಾ ಸೋಂಕಿಗೆ ಕೋಳಿ ಮಾಂಸ ಸೇವನೆ ಕಾರಣ ಎಂಬುದಾಗಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ ಹಾಗೂ ಫೇಸ್​ಬುಕ್​​ಗಳಲ್ಲಿ ಸುಳ್ಳು ಸಂದೇಶ ಹರಡುತ್ತಿದ್ದಾರೆ. ಇದರಿಂದ ಕೋಳಿ ಮಾಂಸ ಸೇವಿಸುವವರ ಸಂಖ್ಯೆ ಏಕಾಏಕಿ ಕುಸಿದಿದೆ. ಕೆಜಿಗೆ 85 ರೂ. ಇದ್ದ ಕೋಳಿ ಮಾಂಸ ಈಗ 25 ರೂ.ಗೆ ಬಂದು ತಲುಪಿದ್ದು, ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ರೈತನ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details