ಕರ್ನಾಟಕ

karnataka

ETV Bharat / city

ಸಿಎಂ ಪುತ್ರನ ಸಮ್ಮುಖದಲ್ಲೇ ರೈತರಿಂದ ಅಸಮಾಧಾನ... ಕಾರಣ? - ಡಿಸಿ ಮಹಾಂತೇಶ್ ಬೀಳಗಿ ರೈತರನ್ನು ಸಮಾಧಾನ ಪಡಿಸಲು ಯತ್ನಿಸಿ

ಜಿಲ್ಲೆಯ ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ರೈತರಿಗೆ ಕಂಕಣ ಕಟ್ಟಲಿಲ್ಲ ಎಂಬ ಕಾರಣಕ್ಕೆ ಸಿಎಂ ಯಡಿಯೂರಪ್ಪ ಪುತ್ರ ರಾಘವೇಂದ್ರ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.‌ಪಿ.‌ರೇಣುಕಾಚಾರ್ಯ ಇದ್ದ ಕಾರ್ಯಕ್ರಮದಲ್ಲಿ ರೈತರು ಅಸಮಾಧಾನ ವ್ಯಕ್ತಪಡಿಸಿದರು.

KN_DVG_05_21_KANKANA_GADDALA_SCRIPT_7203307KN_DVG_05_21_KANKANA_GADDALA_SCRIPT_7203307
ಸಿಎಂ ಪುತ್ರನ ಸಮ್ಮುಖದಲ್ಲೇ ರೈತರು ಕೆಂಡಮಂಡಲ ಕಾರಣವೇನು ಗೊತ್ತಾ...?

By

Published : Feb 21, 2020, 7:51 PM IST

ದಾವಣಗೆರೆ:ಜಿಲ್ಲೆಯ ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ತಮಗೆ ಕಂಕಣ ಕಟ್ಟಲಿಲ್ಲ ಎಂದು ಸಿಎಂ ಯಡಿಯೂರಪ್ಪ ಪುತ್ರ ರಾಘವೇಂದ್ರ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.‌ಪಿ.‌ ರೇಣುಕಾಚಾರ್ಯ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಕಂಕಣ ಕಟ್ಟಲಿಲ್ಲವೆಂದು ಸಿಎಂ ಪುತ್ರನ ಸಮ್ಮುಖದಲ್ಲೇ ರೈತರ ಅಸಮಾಧಾನ
ಹಿರೇಕಲ್ಮಠದಲ್ಲಿ‌ ಮಾರ್ಚ್ 5 ರಿಂದ 7 ರವರೆಗೆ ರಾಜ್ಯಮಟ್ಟದ ಕೃಷಿ ಮೇಳ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಗುದ್ದಲಿ ಪೂಜೆ ಹಮ್ಮಿಕೊಳ್ಳಲಾಗಿತ್ತು.‌ ಈ ವೇಳೆ ರೈತರಿಗೆ ಕಂಕಣ ಕಟ್ಟದೇ ಕೇವಲ ರಾಜಕಾರಣಿಗಳಿಗೆ ಮಾತ್ರ ಕಟ್ಟಿದ್ದರಿಂದ, ರೈತರನ್ನು ನಿರ್ಲಕ್ಷ್ಯ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಪೂಜೆಯಲ್ಲಿ ಸಂಸದ ರಾಘವೇಂದ್ರ, ಸಿ.ಎಂ. ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ ಶಾಂತನಗೌಡ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್.ಪಿ. ಹನುಮಂತರಾಯ ಸೇರಿದಂತೆ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಪಾಲ್ಗೊಂಡಿದ್ದರು.
ನಂತರ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಡಿಸಿ ಮಹಾಂತೇಶ್ ಬೀಳಗಿ ಅವರು ರೈತರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಈ ವೇಳೆ ಬಲ್ಲೂರು ರವಿಕುಮಾರ್ ಹಾಗೂ ರೈತರು ರಾಜಕಾರಣಿಗಳು ಮಾತ್ರ ಬೇಕಿದ್ದರೆ ನಮ್ಮನ್ಯಾಕೆ ಆಹ್ವಾನಿಸಿದ್ದೀರಿ ಎಂದು ಪ್ರಶ್ನಿಸಿದರು.‌ ಬಳಿಕ ಪೂಜೆ ವೇಳೆ ಈ ರೀತಿ ಮಾತನಾಡಬೇಡಿ, ಪೂಜೆಗೆ ಬನ್ನಿ ಎಂದು ಡಿಸಿ ಹಾಗೂ ಶ್ರೀಗಳು ಮನವಿ ಮಾಡಿಕೊಂಡ ಬಳಿಕ ರೈತರೆಲ್ಲರೂ ಪೂಜೆಯಲ್ಲಿ ಪಾಲ್ಗೊಂಡರು.

ABOUT THE AUTHOR

...view details