ಕರ್ನಾಟಕ

karnataka

ರೈತ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ವೃದ್ಧ.. ಬಿಜೆಪಿಯಿಂದ ಸನ್ಮಾನ

By

Published : Sep 28, 2020, 4:26 PM IST

ರೈತ ಹೋರಾಟಗಾರರನ್ನು ತರಾಟೆಗೆ ತೆಗೆದುಕೊಂಡ ಗುಡ್ಡಪ್ಪ ಚಿನ್ನಿಕಟ್ಟೆಯವರನ್ನು ಪತ್ತೆ ಹಚ್ಚಿ ಜಿಲ್ಲಾ ಬಿಜೆಪಿ‌ ಮುಖಂಡರು ಶಾಲು ಹೊದಿಸಿ ಸನ್ಮಾನಿಸಿದರು‌. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೃಷಿ ಕಾಯ್ದೆಗಳ ತಿದ್ದುಪಡಿಗೆ ಸಾಮಾನ್ಯ ರೈತರು ವಿರೋಧ ವ್ಯಕ್ತಪಡಿಸುತ್ತಿಲ್ಲ. ಹೋರಾಟ ರಾಜಕೀಯ ಪ್ರೇರಿತ ಎಂದು ಬಿಜೆಪಿ‌ ಮುಖಂಡರು ಆರೋಪಿಸಿದರು..

ವೃದ್ಧ ರೈತನಿಗೆ ಬಿಜೆಪಿಯಿಂದ ಸನ್ಮಾನ
ವೃದ್ಧ ರೈತನಿಗೆ ಬಿಜೆಪಿಯಿಂದ ಸನ್ಮಾನ

ದಾವಣಗೆರೆ: ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ರೈತ ಮುಖಂಡರಿಗೆ ವೃದ್ಧ ತರಾಟೆಗೆ ತೆಗೆದುಕೊಂಡ ಘಟನೆ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಮುಂಭಾಗ ಇರುವ ತರಕಾರಿ‌ ಮಾರುಕಟ್ಟೆ ಬಳಿ‌ ನಡೆದಿದೆ‌.

ಬಂದ್ ಹಿನ್ನೆಲೆ ತರಕಾರಿ ಮಾರಾಟ ಸ್ಥಗಿತಗೊಳಿಸಿ ಹೋರಾಟಕ್ಕೆ ಸಹಕರಿಸುವಂತೆ ಮನವಿ‌ ಮಾಡಿದರು. ಕೇಂದ್ರ ಸರ್ಕಾರ ತರಲು ಹೊರಟಿರುವ ತಿದ್ದುಪಡಿ ಕಾಯ್ದೆಗಳು ರೈತರಿಗೆ ಮಾರಕ.‌ ಜಮೀನಿನಲ್ಲಿ‌ ಉಳುಮೆ‌ ಮಾಡಲು ಆಗದು‌. ಜಮೀನು‌ ಖರೀದಿ ಮಾಡಲು ನಮ್ಮಂತವರಿಗೆ ಸಾಧ್ಯವಾಗುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ರೈತರನ್ನು ತರಾಟೆಗೆ ತೆಗೆದುಕೊಂಡ ವೃದ್ಧ

ಆಗ ಸ್ಥಳದಲ್ಲಿಯೇ ಇದ್ದ ರೈತ ಗುಡ್ಡಪ್ಪ ಚಿನ್ನಿಕಟ್ಟೆ ಎಂಬುವರು "ಮೋದಿ ಒಳ್ಳೆಯದು ಮಾಡ್ತಾರೆ. ಒಳ್ಳೆಯದನ್ನೇ ಮಾಡಿದ್ದಾರೆ. ಅವರು ಇರುವುದರಿಂದಲೇ ನಾವು ಇಷ್ಟರ ಮಟ್ಟಿಗೆ ಇದ್ದೇವೆ. ಸುಮ್ನೆ ಯಾಕೆ ಹೋರಾಟ ಮಾಡ್ತೀರಾ'' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ರೈತ ಹೋರಾಟಗಾರರನ್ನು ತರಾಟೆಗೆ ತೆಗೆದುಕೊಂಡ ಗುಡ್ಡಪ್ಪ ಚಿನ್ನಿಕಟ್ಟೆಯವರನ್ನು ಪತ್ತೆ ಹಚ್ಚಿ ಜಿಲ್ಲಾ ಬಿಜೆಪಿ‌ ಮುಖಂಡರು ಶಾಲು ಹೊದಿಸಿ ಸನ್ಮಾನಿಸಿದರು‌. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೃಷಿ ಕಾಯ್ದೆಗಳ ತಿದ್ದುಪಡಿಗೆ ಸಾಮಾನ್ಯ ರೈತರು ವಿರೋಧ ವ್ಯಕ್ತಪಡಿಸುತ್ತಿಲ್ಲ. ಹೋರಾಟ ರಾಜಕೀಯ ಪ್ರೇರಿತ ಎಂದು ಬಿಜೆಪಿ‌ ಮುಖಂಡರು ಆರೋಪಿಸಿದರು.

ABOUT THE AUTHOR

...view details