ಕರ್ನಾಟಕ

karnataka

ETV Bharat / city

ಎಸಿಬಿ ದಾಳಿ ವೇಳೆ ಅಧಿಕಾರಿಗಳ ಮೇಲೆ ಕಾರು ಹತ್ತಿಸಲು ಯತ್ನ.. ದಾವಣಗೆರೆ ಕಂದಾಯ ನಿರೀಕ್ಷಕ ಎಸ್ಕೇಪ್​ - Davangere Revenue officer news

ಖಾತೆ ಬದಲಾವಣೆ ಮಾಡಿಕೊಡುವುದಕ್ಕೆ 50 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ ದಾವಣಗೆರೆ ಕಂದಾಯ ನಿರೀಕ್ಷಕನೊಬ್ಬ ದಾಳಿ ವೇಳೆ ಎಸಿಬಿ ಅಧಿಕಾರಿಗಳ ಮೇಲೆ ಕಾರು ಹತ್ತಿಸಲು ಯತ್ನಿಸಿ, ತಪ್ಪಿಸಿಕೊಂಡಿದ್ದಾನೆ.

Davangere Revenue officer
ದಾವಣಗೆರೆ ಕಂದಾಯ ನಿರೀಕ್ಷಕ

By

Published : Aug 7, 2021, 11:27 AM IST

ದಾವಣಗೆರೆ: ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ದಾವಣಗೆರೆ ಕಂದಾಯ ನಿರೀಕ್ಷಕ ಸಿದ್ದೇಶ್ ಎಂಬುವರು ತಪ್ಪಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದಾವಣಗೆರೆಯ ಶಿವಕುಮಾರ್ ಬಡಾವಣೆಯಲ್ಲಿ ಖಾತೆ ಬದಲಾವಣೆ ಮಾಡಿಕೊಡುವುದಾಗಿ ಹೇಳಿ ವ್ಯಕ್ತಿಯೊಬ್ಬರಿಂದ ಮೊನ್ನೆ 15 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳ ಕೈಗೆ ಸಿಗದೆ ಕಂದಾಯ ನಿರೀಕ್ಷಕ ಸಿದ್ದೇಶ್ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಖಾತೆ ಬದಲಾವಣೆ ಮಾಡಿಕೊಡುವುದಕ್ಕೆ 50 ಸಾವಿರ ರೂ.ಗೆ ಬೇಡಿಕೆ ಇಟ್ಟಿರುವ ಕುರಿತು ಎಸಿಬಿಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆ ಲಂಚ ಪಡೆಯುವಾಗ ದಾಳಿ ನಡೆಸಲಾಗಿದೆ. ಆದರೆ ಈ ವೇಳೆ ಎಸಿಬಿ ಅಧಿಕಾರಿಗಳ ಮೇಲೆ ಕಾರು ಹತ್ತಿಸಲು ಯತ್ನಿಸಿ, ಸಿದ್ದೇಶ್ ತಪ್ಪಿಸಿಕೊಂಡಿದ್ದಾನೆ ಎನ್ನಲಾಗ್ತಿದೆ.

ಈ ಕುರಿತು ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.

ABOUT THE AUTHOR

...view details