ದಾವಣಗೆರೆ: ಲೋಕಸಭೆ ಚುನಾವಣೆ ಹಿನ್ನಲೆ ಅಂಗವಿಕಲರು ಸೇರಿದಂತೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ವಾಕ್ ಮತ್ತು ಶ್ರವಣದೋಷವುಳ್ಳವರು ಸೀಟಿ ಊದುತ್ತಾ ನಗರದಲ್ಲಿ ಜಾಗೃತಿ ಮೂಡಿಸಿದರು.
ದಾವಣಗೆರೆಯಲ್ಲಿ ವಿಶೇಷ ಚೇತನರಿಂದ ವಿಭಿನ್ನವಾಗಿ ಚುನಾವಣೆ ಜಾಗೃತಿ - undefined
ವಾಕ್ ಮತ್ತು ಶ್ರವಣದೋಷವುಳ್ಳ ವಿಶೇಷ ಚೇತನರು ದಾವಣಗೆರೆಯಲ್ಲಿ ವಿಭಿನ್ನವಾಗಿ ಚುನಾವಣಾ ಜಾಗೃತಿ ಮೂಡಿಸಿದರು.
ವಿಶೇಷ ಚೇತನರಿಂದ ವಿಭಿನ್ನವಾಗಿ ಚುನಾವಣೆ ಜಾಗೃತಿ
ನಗರದ ಜಯದೇವ ವೃತ್ತದಿಂದ ಆರಂಭಗೊಂಡ ಜಾಗೃತಿ ಜಾಥಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ ಎಚ್ ವಿಜಯ ಕುಮಾರ್ ಹಸಿರು ನಿಶಾನೆ ತೋರಿಸಿದರು. ಈ ವೇಳೆ ವಾಕ್ ಮತ್ತು ಶ್ರವಣದೋಷವುಳ್ಳವರು ಸೀಟಿ ಊದುತ್ತಾ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಅವರದೇ ಆದ ಭಾಷೆಯಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಪ್ರಜಾಪ್ರಭುತ್ವ ಬಲಗೊಳ್ಳಲು ಕಡ್ಡಾಯವಾಗಿ ಮತದಾನ ಮಾಡಿ ಎಂದು ಶ್ರವಣದೋಷವುಳ್ಳುವರು ಸೀಟಿ ಊದುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ. ಯಾವುದೇ ಆಮಿಷಕ್ಕೆ ಒಳಗಾಗದೆ ಮತದಾನ ಮಾಡುವಂತೆ ಜನಸಾಮಾನ್ಯರಿಗೆ ಅವರು ಕರೆ ನೀಡಿದರು.