ದಾವಣಗೆರೆ:ಜೀವನದಲ್ಲಿ ಜುಗುಪ್ಸೆಗೊಂಡು ವೃದ್ಧ ದಂಪತಿ ಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರನ್ನು ಕಾಪಾಡಲು ಹೋದ ಯುವಕನೂ ಕೂಡ ನೀರುಪಾಲಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇಗರದಹಳ್ಳಿ ಬಸಾಪುರ ಜರುಗಿದೆ.
ವೃದ್ಧ ದಂಪತಿ ಚನ್ನಗಿರಿ ತಾಲೂಕಿನ ಅಂಚಿನ ಸಿದ್ದಾಪುರ ಬಳಿ ನೀರಿಗೆ ಬಿದ್ದಿದ್ದಾರೆ. ಇದನ್ನು ಕಂಡ ಯುವಕನೊಬ್ಬ ಕಾಪಾಡಲು ಹೋಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ವೃದ್ಧ ದಂಪತಿಯ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದರು. ಆದರೆ, ಯುವಕ ಇನ್ನೂ ಪತ್ತೆಯಾಗಿಲ್ಲ. ಜೀವ ಕಳೆದುಕೊಂಡ ವೃದ್ಧ ದಂಪತಿ ಮತ್ತು ಯುವಕನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.