ಕರ್ನಾಟಕ

karnataka

ETV Bharat / city

ಡಿಸಿಗೆ ಹೃದಯಾಘಾತವಾಗಿದೆ ಎಂದು ಸುಳ್ಳು ಸುದ್ದಿ: ನಾನು ಮಸ್ತ್ ಇದೀನಿ ಎಂದ್ರು ಮಹಾಂತೇಶ್ ಬೀಳಗಿ - ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸ್ಪಷ್ಟನೆ

ಕಳೆದ ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರಿಗೆ ಹೃದಯಾಘಾತ ಆಗಿದೆ ಎಂದು ಕೆಲ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರಂತೆ. ಈ ಸುದ್ದಿ ತಿಳಿದು ಡಿಸಿ ಮಹಾಂತೇಶ್ ಬೀಳಗಿ (Mahantesh Bilagi) ತಕ್ಷಣ ವಿಡಿಯೋವೊಂದನ್ನ ಮಾಡಿ ಸ್ಪಷ್ಟನೆ‌ ನೀಡಿದ್ದಾರೆ..

DC Mahantesh Bilagi
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

By

Published : Nov 12, 2021, 2:44 PM IST

ದಾವಣಗೆರೆ : 'ಯಾರೋ ಕಿಡಿಗೇಡಿಗಳು ನನಗೆ ಹೃದಯಾಘಾತ (Heart attack) ಆಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸ್ಯಾರ. ನಾನು ಮಸ್ತ್ ಇದೀನಿ, ಕೆಲಸ‌ ಮಾಡ್ತೀದಿನಿ‌' ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ (Mahantesh Bilagi) ಸ್ಪಷ್ಟನೆ ನೀಡಿದ್ದಾರೆ.

ಹೃದಯಾಘಾತವಾಗಿದೆ ಎಂದು ಸುಳ್ಳು ಸುದ್ದಿ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸ್ಪಷ್ಟನೆ

ಕಳೆದ ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರಿಗೆ ಹೃದಯಾಘಾತ ಆಗಿದೆ ಎಂದು ಕೆಲ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರಂತೆ.

ಸುದ್ದಿ ತಿಳಿದ ಸಾಕಷ್ಟು ಜನ ಹಾಗೂ ಅಧಿಕಾರಿಗಳು ಕರೆ ಮಾಡಿ ಜಿಲ್ಲಾಧಿಕಾರಿಯವರಿಗೆ ಆರೋಗ್ಯ ವಿಚಾರಿಸಿದಾಗ ಈ ವಿಚಾರ ಬಹಿರಂಗವಾಗಿದೆ. ಸುದ್ದಿ ತಿಳಿದು ಡಿಸಿ ಮಹಾಂತೇಶ್ ಬೀಳಗಿ ತಕ್ಷಣ ವಿಡಿಯೋವೊಂದನ್ನ ಮಾಡಿ ಸ್ಪಷ್ಟನೆ‌ ನೀಡಿದ್ದಾರೆ.

ಕ್ರಿಯಾಶೀಲನಾಗಿ ಕೆಲಸ ಮಾಡುತ್ತಿದ್ದೇನೆ :ಕಳೆದ 2 ವರ್ಷಗಳಿಂದ ಜಿಲ್ಲೆಯಲ್ಲಿ ಕ್ರಿಯಾಶೀಲನಾಗಿ ಕೆಲಸ ಮಾಡುತ್ತಿದ್ದೇನೆ. ಎಲ್ಲಾ ಜನ ನನಗೆ ಆಶೀರ್ವಾದ ಮಾಡಿದ್ದರಿಂದ ಕ್ರಿಯಾಶೀಲನಾಗಿ ಕೆಲಸ ಮಾಡುತ್ತಿದ್ದೇ‌ನೆ. ಸದ್ಯ ನಾನು ನನ್ನ ಕಚೇರಿಯಲ್ಲಿಯೇ ಕೆಲಸ ಮಾಡುತ್ತಿದ್ದೇನೆ.

ಕೆಲ ಕಿಡಿಗೇಡಿಗಳು ನನಗೆ ಹೃದಯಾಘಾತ ಆಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಈ ವಿಡಿಯೋ ನೋಡ್ರೀ.. ನಾನು ಪಕ್ಕಾ ಇದೀನಿ. ಮಸ್ತ್ ಇದೀನಿ. ಯಾರು ಕೂಡ ಈ ಸುದ್ದಿಯನ್ನು ನಂಬಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

ABOUT THE AUTHOR

...view details